Submission 5458

ಭೂರಮೆ ಶೃಂಗಾರ

ರಚನೆ : ಸವಿತಾ ಮುದ್ಗಲ್

----------------------------------

ಶ್ರಾವಣದ ಮಳೆಯಿಂದ ನೆಲವೆಲ್ಲ ಮೈತೋಯ್ದು ನಿಂತಿದೆ ಶ್ರಾವಣ ತಂಗಾಳಿಯಿಂದ ತಂಪಾಗಿ ಇಳೆಗೆ ಚಳಿಯಂತಿದೆ|| ಕಾರ್ಮೋಡ ಮರೆಯಾಗಿ ನವಿರಾದ ಕಿರಣ ಬಂದಿದೆ ರವಿಯ ಕಾಂತಿಯಿಂದ ಭೂ ತಾಪಕೆ ಜೊತೆಯಾಗಿದೆ|| ಹಸಿರಿನ ಚಿಗುರು ಬಂದು ಹುಮ್ಮಸ್ಸು ನೂರ್ಮಡಿಯಾಗಿದೆ ಮನದ ಪುಳಕವಿಂದು ಇಬ್ಬನಿಯ ಜೊತೆಗೂಡಿದೆ|| ಜರಿತೊರೆಗಳು ಹಾಲಂತೆ ಹರಿದು ಸುರಪಾನವಾಗಿದೆ ಹಾಲುಜೀನಿನ ಸಂಗಮದಂತೆ ಇಳೆಯ ಶೃಂಗಾರವಾಗಿದೆ||

----------------------------------

ನೋಂದಣಿ ಐಡಿ : KPFS2-8856

0
Votes
85
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top