ಆಪ್ತಬಂಧು
ರಚನೆ : ಅಶ್ವಿನಿ ರಾಮಾನುಜಂ
----------------------------------
ಕಾರಿರುಳಲಿ ಬರಸಿಡಿಲಲಿ ಧೃತಿಗೆಡದೆ ನೀ ಮುನ್ನುಗ್ಗುವೆ ನೀರವತೆಯ ನಿಶೆಯಲ್ಲಿಯು ಎವೆಯಿಕ್ಕದೆ ಗಡಿ ಕಾಯುವೆ ಪ್ರಾಣವನೆ ಪಣಕಿಟ್ಟು ರಾಷ್ಟ್ರಸೇವೆ ಮಾಡುವೆ ನೀನಿರದೆ ದೇಶಕ್ಕೆ ನೆಮ್ಮದಿಯದು ಸಾಧ್ಯವೆ? ರೋಷವುಕ್ಕಿ ಮೇರೆ ಮೀರಿ ಪ್ರಕೃತಿ ಕೋಪಗೊಳ್ಳಲಿ ದುಷ್ಟ ಉಗ್ರ ಅಟ್ಟಹಾಸ ಸಮಾಜವನ್ನೆ ಕಾಡಲಿ 'ಆಪ್ತಬಂಧು' ಬರುವೆ ಬೇಗ ಭಯವೆ ಇರದು ನಮ್ಮಲಿ ನಿನ್ನ ಹಡೆದ ತಾಯ ತ್ಯಾಗ ಸ್ಪೂರ್ತಿಯ ಸೆಲೆಯಾಗಲಿ ಬಲಿದಾನದ ನೆತ್ತರು ಕೋಡಿಯಾಗಿ ಹರಿದಿದೆ ನಿನ್ನ ಮನೆಯ ಬೆಳಕು ನಂದಿ ಕತ್ತಲೀಗ ಕವಿದಿದೆ 'ದೇಶಸೇವೆ' ಎಂಬ ಪದವು ಸಾರ್ಥಕತೆಯ ಹೊಂದಿದೆ ಭರತಮಾತೆ ಸೇವೆಗೀಗ ವೀರಸ್ವರ್ಗ ಕಾದಿದೆ
----------------------------------
ನೋಂದಣಿ ಐಡಿ : KPFS2-8802