Submission 5378

ಯಾರು ಕಾಣದ ತಿಮ್ಮಕ್ಕ ಅಲ್ಲೊಬ್ಬರು

ರಚನೆ : ಪ್ರಕೃತಿ

----------------------------------

ಸಾಲುಮರದ ತಿಮ್ಮಕ್ಕ -ಬರೀ ಬೂದಿಯ ಮಣ್ಣಿನ, ತಾಯಿಯಂತೆ ನಿಂತವರು ... ಸುಟ್ಟ ಬಿಸಿಲನ್ನು ಹೆಗಲಾಗಿ ಹೊತ್ತು ಒಂಟಿ ದಾರಿಯಲಿ ನೆರಳನ್ನು ನೆಟ್ಟವರು ತಿಮ್ಮಕ್ಕ ಯಾರೂ ಕೇಳದ ಕಥೆಯನ್ನು ತಾನು ಬೆಳೆಸಿದ ಗಿಡದ ಎಲೆಗಳಿಗೆ ಹೇಳಿ.. ಜಗಕೆ ನಿಜವಾದ ತಾಯ್ತನ ತೋರಿದವರು ಜೀವವೇ ಹಸಿರಿನ ಹೆಸರಿಗೆ ಮುಡಿಪಿಟ್ಟವರು ತಿಮ್ಮಕ್ಕ ಕಣ್ಣಲ್ಲಿ ಕನಸಿಲ್ಲವೆಂದು, ಮನೆಯಲ್ಲಿ ಮಗುವಿಲ್ಲವೆಂದು ಹಿಯಾಳಿಸಿದ ಜನರ ಮುಂದೆ, ಅವರು ಮಾತ್ರ ಹಸಿರು ಸಿರಿತನದ ಕನಸು ಬಿತ್ತಿ ಮರವನ್ನೇ ಮಗುವೆಂದು ಸಾರಿದವರು ತಿಮ್ಮಕ್ಕ ಸಾಲುಮರದ ಸಾವಿರಾರು ಎಲೆಗಳ ನಡುವೆ ಇನ್ನೂ ಗುಣವಾಗುತ್ತಿದೆ ಅವರ ನಿಸ್ವಾರ್ಥ ಭಾವ ಮರಗಳ ಮನಸ್ಸಿನ ಸದ್ೃದಯಿಯಾದವರು ಯಾರು ಕಾಣದ ತಿಮ್ಮಕ್ಕ ಅಲ್ಲೊಬ್ಬರು...

----------------------------------

ನೋಂದಣಿ ಐಡಿ : KPFS2-8803

0
Votes
83
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top