Submission 5344

ಅಪ್ಪ

ರಚನೆ : ಹಿಮಜ

----------------------------------

ಅಪ್ಪನೆಂದರೆ ಅರಿಯದ ಲೋಕಕೆ ಜೀವಕೊಟ್ಟು ತಂದವ. ಅರಿತು ಬದುಕಿ ಬಾಳಲು ನಲ್ಮೆ ರತ್ನ ರಂಗೋಲಿ ಬಿಡಿಸಿದವ. ಕ್ಷಣ ಕ್ಷಣಕೂ ತಪ್ಪಿ ನಡೆದ ಹಾದಿಗೆ ಕಣ್ಣಿಟ್ಟು ತಿದ್ದಿ ತೀಡಿದವ. ಬೆತ್ತಲ ದೇಹಕೆ ಮಾನವ ಮುಚ್ಚಲು ತುಂಡರವೆ ಉಡಿಸಿದವ. ಹಸಿದರೆ ಸಾಲ ಸೂಲವ ಮಾಡಿ ರಾಗಿ ಅಂಬಲಿ ಕೊಟ್ಟವ. ಓದಿಗಾಗಿ ಜೀತ ಮಾಡಿ ಬಳಪ ಸ್ಲೇಟು ಲೇಖನಿ ಕೊಡಿಸಿದವ. ಬರಿಗಾಲಲ್ಲೆ ಹೆಗಲ ಮೇಲೋತ್ತು ಶಾಲೆವರಿಗೂ ಬಿಟ್ಟವ. ಹಬ್ಬಕೆ ಹೊಸ ಬಟ್ಟೆ ಕೊಡಿಸಿ ಚಿಂದಿ ಅಂಗಿ ಚಡ್ಡಿ ತೊಟ್ಟವ. ಜಾತ್ರೆಲಿ ಬಾಂಬೆ ಮಿಠಾಯಿ ತಿನಿಸಿ ಆನಂದವನ ಕಂಡವ. ಯಾರಾದರೂ ಉಣ್ಣಲಿಕ್ಕಿದರೆ ಬಚ್ಚಿಟ್ಟು ತಂದು ನೀಡಿದವ. ಅವ್ವ ಇಲ್ಲದಾಗ ಗೊಣ್ಣೆ ಇಂಡಿ ತಿಗನ ತೋಳೆದು ಖುಷಿಪಟ್ಟವ. ಅಪ್ಪನೆಂದರೆ ನಭ ಸೂರ್ಯ ಚಂದಿರ ಪೃಥ್ವಿಗೂ ದೊಡ್ಡವ.

----------------------------------

ನೋಂದಣಿ ಐಡಿ : KPFS2-8784

0
Votes
84
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top