Submission 5270

ಮೆಘಮಾತು

ರಚನೆ : ರುಚಿತಾ ಹೆಗ್ಗಡೆ

----------------------------------

ಮುಗಲಾಗ ಮಾಡ ಕಟ್ಟಿ ಧರಿಣಿಗಿ ಹೇಳಿತ್ತ ನೋಡ ನಾ ಕಟ್ಟೀನಿ ನೀರ ಗೂಡ ಬರತೇನಿ ನಿನ್ನಗೂಡ... ಹೊಳಿ ತುಂಬಿ ಈಜಲೆನಾ ನಿನ್ನ ಕಣ್ಣೀರ ಕೂಡಲೇನಾ ನೀನ್ನ ನೀರ ನಿನಗ ತಣಿಸಿ ನಾ ಮಣ್ಣ ಸೇರಲೆನ... ಇದ್ದರೂ ನಾ ಮುಗಲಾಗ ಬಿಟ್ಟಿಲ್ಲ ನಿನ್ನ ಸುತ್ತ ನೆನಸೇನಿ ನಿನ್ನ ಮತ್ತ ಮತ್ತ ನಿನ್ನ ಪಾದಕ ನಾ ಅತ್ತ ಅತ್ತ... ನಾನೆಷ್ಟ ಎತ್ತರ ಇದ್ದರೇನ್ ಈ ತಿಳಿ ಮುಗಲಾಗ ಬಂದ ಕೂಡೇನಿ ಅವ್ವ ನಿನ್ನ ಒಡಲಾಗ ನಾ ಮಣ್ಣಾದರು ಹಡೆದವ್ವ ಕೂಸ ನೋಡಾ ನಿನ್ನ ಮಗಲಾಗ...

----------------------------------

ನೋಂದಣಿ ಐಡಿ : KPFS2-8733

2
Votes
111
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top