ಯಾರು ಹಿತವರು?
ರಚನೆ : ಅರುಣಕುಮಾರ ಎಂ
----------------------------------
ಜನ್ಮವಿತ್ತು ಸಾಕಿ ಸಲುಹಿದ ಪೋಷಕರೇ, ರಕ್ತ ಹಂಚಿಕೊಂಡು ಜೊತೆಗುಟ್ಟಿ ಬೆಳೆದ ಸಹೋದರ, ಸಹೋದರಿಯರೇ, ಬಾಲ್ಯದ ಸಮಯವ ಹಸನಾಗಿಸಿದ ಮಿತ್ರರೇ ಅಥವಾ ಕಷ್ಟದ ಪರಿಸ್ಥಿತಿಗೆ ಕೈ ಕೊಡವಿದ ಸಂಭಂದಿಕರೇ, ಯಾರು ಹಿತವರು ನಿನಗೆ ಈ ನಾಲ್ವರೊಳಗೆ.? ವಿದ್ಯಾಸಕ್ತಿಯಿಂದ ಉದ್ಭವಿಸಿದ ವಿವೇಚನೆಯೋ, ಅಂತಃಕರಣವ ಗಾಢ ನಿದ್ರೆಯಿಂದ ಬಂದಿದೆಬ್ಬಿಸುವ ಮನಸ್ಥಿತಿಯೋ ಅಥವಾ ನಿನ್ನೊಳಗೆ ನೀ ಇಳಿದು ಕಂಡ ಸತ್ಯವಲೋಕನದ ಸಾರಥಿಯೋ ಯಾರು ಹಿತವರು ನಿನಗೆ ಈ ಜಗದೊಳಗೆ ನಿನ್ನ ವಿನಃ?
----------------------------------
ನೋಂದಣಿ ಐಡಿ : KPFS2-8716