Submission 4932

ಮುಸುಕಿನೊಳಗೆ...

ರಚನೆ : ವನಜಾಕ್ಷಿ ಪಿ ಚಂಬ್ರಕಾನ

----------------------------------

ಮುಸುಕೊದ್ದು ಮಲಗಿದ್ದೆ ಮೌನವಾಗಿ ಗುಂಯ್ ಗುಡುವ ರಾಗಾಲಾಪ ಬಲು ಸನಿಹವಾಗಿ.. ಕಿವಿಯೆಲ್ಲಾ ಕಚಗುಳಿಯಿಟ್ಟಂತೆ ರೋಮ ರೋಮಗಳು ನೆಟ್ಟಗಾಗಿ! ಮೀಸೆ ತಿರುವುತ ನಾ ಹೊದಿಕೆಯೊಳಗೆ ಮುಸಿನಗು ಕಂಡೂ ಕಾಣದಂತೆ! ಏನೆಲ್ಲಾ ನಡೆಸಿಲ್ಲ ಕತ್ತಲ ಸಾಮ್ರಾಜ್ಯದಲಿ! ರಂಗಿನಾಟಗಳೆಲ್ಲವೂ ಮುಸುಕಿನೊಳಗೇ... ಜಿಂಕೆ ಚರ್ಮದಲಿ ಬಂಧಿಯಾಗಿಹ ವ್ಯಾಘ್ರಗಳು.. ಪರದೆಯನು ಸರಿಸಿ ಪಂಜಗಳ ಮಸೆಯುತ.. ಮಬ್ಬಿನಲಿ ಬೇಟಕಿಳಿದು ಮತ್ತಿನಲಿ ಓಲಾಡುತ.. ಕಣ್ಣಾಮುಚ್ಚಾಲೆಯಾಡುವ ಸಮಯ! ಎಂದಿಗೂ ಮನಕೆ ರೇಜಿಗೆಯೆನಿಸಿಲ್ಲ ಮುಸುಕಿನೊಳಗಿನ ಗುದ್ದಾಟದಲ್ಲಿ...

----------------------------------

ನೋಂದಣಿ ಐಡಿ : KPFS2-8475

27
Votes
179
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top