Submission 4890

ಅಂತರ್ಗೀತೆ

ರಚನೆ : ಕಾವ್ಯಶ್ರೀ ರಂಗಪ್ಪ

----------------------------------

ಅರೆಗಳಿಗೆ ಕಳೆಯೋ ಜನರೊಳು, ಗೀತೆಯ ಗಿಣಿಪಾಠವ ಕಲಿವೆ. ಕ್ಷೀಣದ ಕಣ್ತೆರೆಯೋ ಕತ್ತಲೊಳು, ಬಾಲ ಸುಟ್ಟ ಬೆಕ್ಕಿನಂತಾಡುವ ಸುಯೋಧನನ ಕಾಣುವೆ. ಮಾತಿಗೆ ಬಾಯ್ತೆರೆಯೋ ಮೌನದೊಳು, ಭೀಷ್ಮ ಪಾರ್ಥರ ಲೆಕ್ಕವನರಿವೆ. ಧರ್ಮದ ಬೀಜ ಬಿತ್ತು ಎದೆಯೊಳು, ಹದಿನೆಂಟು ಪರ್ವಗಳ ವಾಸ್ತವದಲ್ಲಿ ನೋಡುವೆ. ತುಟಿ ಬಿಚ್ಚು ಚದುರಂಗದಾಟದೊಳು, ಇಲ್ಲವೆ ಗೆಲ್ಲಲು ಕುರುಕ್ಷೇತ್ರ ಭೂಮಿಯನ್ನೇ ಹುಡುಕುವೆ.

----------------------------------

ನೋಂದಣಿ ಐಡಿ : KPFS2-8436

7
Votes
121
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top