Submission 4864

ನಮ್ಮ ಕನ್ನಡ

ರಚನೆ : ಶ್ವೇತಾ ಚನ್ನಬಸಪ್ಪ ಹೂಗಾರ

----------------------------------

ಉಸಿರಾಗಲಿ ಕನ್ನಡ ಹಸಿರಾಗಿ ಬೆಳೆಯಲಿ ಕನ್ನಡ ಹಸಿವಿನ್ನಲ್ಲು ಕನ್ನಡ ಈ ಮಸಿಯಲ್ಲು ಕನ್ನಡ ಸಾಹಿತ್ಯದ ಹಿರಿಮೆಯಿದು ಸಂಸ್ಕೃತಿಯ ತವರಿದು ಸಂಗೀತದ ಸ್ವರವಿದು ಸು-ದೀಪಗಳ ಬೆಳಕಿದು ಪ್ರಕೃತಿಯ ಪ್ರೀತಿಯಲ್ಲಿ ಸ್ವರ್ಗದ ಸ್ವರ್ಣವಿದು ಪರಂಪರೆಯ ಸಾರ ಕಲರವಗಳ ಗುಂಪಿದು ಶಿಲ್ಪಕಲೆಯ ಬೀಡಿದು ಶಿಖರಗಳ ತಾಣವಿದು ಶಿಲೆಗಳ ನಾಡಿದು ಕನ್ನಡ ಕವಿಗಳ ಉಸಿರಿದು ಕಣಕಣದಲೂ ಕನ್ನಡ, ಮಳೆಯ ಅಂಬು ಕನ್ನಡ ಗಂಧಗಾಳಿ ತರುಣ ವರುಣ ಮರಣದಲ್ಲೂ ಕನ್ನಡ ಧರೆಯಲಿ ಜ್ಯೋತಿಯ ಕಿರಣದ ಕೀರ್ತಿ ನಾಡು ಕರುನಾಡಿಗೆ ನನ್ನಮನದ ವಂದನೆಯ ಹಾಡು

----------------------------------

ನೋಂದಣಿ ಐಡಿ : KPFS2-8420

231
Votes
850
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top