Submission 4836

ಜೀವನದ ಸಾರವೇ ಮಹಾಭಾರತ

ರಚನೆ : ಶ್ರದ್ಧಾ ನಂದ್ಯಾಲ್

----------------------------------

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭ್ಯುತ್ತಾನಮಧಮ೯ಸ್ಯ ತದಾತ್ಮಾನಂ ಸೃಜಾಮ್ಯಹಮ್ || ಒಂದು ಧರ್ಮ ಯುದ್ಧದ ಕತೆ, ಸತ್ಯ ಅಸತ್ಯಗಳ ಸಂಘರ್ಷದ ಗಾಥೆ, ಪಾಂಡವರ ಒಗ್ಗಟ್ಟು, ದುರ್ಯೋಧನನ ಅಹಂಕಾರ | ಶಕುನಿಯ ಕವಡೆ ಆಟ, ಧರ್ಮದ ಮೌನ ನಗು || ಭಿಷ್ಮನ ತ್ಯಾಗ, ದೃತರಾಷ್ಟ್ರನ ಸ್ವಾರ್ಥ | ದುರ್ಯೋಧನ ರಾಧೇಯ ಸ್ನೇಹ, ಧರ್ಮದ ಮೇಲಿನ ಅಪಾರ ನಂಬಿಕೆ || ಕಣ್ಣು ಕಟ್ಟಿಕೊಂಡ ಗಾಂಧಾರಿ, ಅಗ್ನಿಯಿಂದ ಹುಟ್ಟಿದ ದ್ರೌಪದಿ | ಇವರಿಬ್ಬರ ಬದುಕು ನೋವಿನ ಕನ್ನಡಿ || ವಸ್ತ್ರಾಪಹರಣ- ಇದು ಕೇವಲ ಪಾಂಚಾಲಿಯ ಅವಮಾನವಲ್ಲ | ಹೆಣ್ಣು ಕುಲಕ್ಕೆ ಮಾನದ ಕಳೆ, ಇದೆ ಯುದ್ಧದ ಜ್ವಾಲೆಯ ಕಿಡಿ || ಕುರುಕ್ಷೇತ್ರ ಇದು ಕೇವಲ ಕೌರವ-ಪಾಂಡವರ ಮಧ್ಯದಲ್ಲ | ನಮ್ಮೊಳಗಿನ ಧರ್ಮ-ಅಧರ್ಮದ ಹೋರಾಟ || ಇದು ಕೇವಲ ಕಥೆಯಲ್ಲ ಕಣ್ಣು ತೆರೆದು ನೋಡಿದರೆ | ಜೀವನದ ಸಾರವೇ ಮಹಾಭಾರತ ||

----------------------------------

ನೋಂದಣಿ ಐಡಿ : KPFS2-8403

213
Votes
1,246
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top