ಬದುಕಿನ ರೀತಿ
ರಚನೆ : ಸವಿತಾ ರಮೇಶ
----------------------------------
ಬದುಕಿನ ಸಂತೆಯಲ್ಲಿ ತಾನಿರುವ ಚಿಂತೆಯಲಿ ಸಿರಿ ಸಂಪದಗಳು ತನಗೆ ಬೇಕೆಂಬ ಅಪೇಕ್ಷೆಯಲಿ ಯಾರಿಗೂ ಸಿಗದ ಸುಖ ತನದೆಂಬ ನೀರಿಕ್ಷೆಯಲಿ ಹಂಬಲಿಸಿ ಹಂಬಲಿಸಿ ಶರಣಾದನು ನಿದ್ರೆಯಲಿ ಮನದಿ ತುಂಬಿದ ಬಯಕೆ ಕಂಡಿತು ಕನಸಿನಲಿ ವಾಸವಿದ್ದನು ಅರಮನೆಯಂತ ಬಂಗಲೆಯಲಿ ಧನ ಕನಕಗಳು ತುಂಬಿದ್ದವು ಬ್ಯಾಂಕ್ ಲಾಕರಲಿ ಧಾನ್ಯಗಳು ರಾಶಿಯಾಗಿದ್ದವು ಗೋದಾಮಿನಲಿ ನಂದನ ವನದ ಹೂವು ಅರಳಿದೆ ಅಂಗಳದಲಿ ಕಾರುಗಳದೇ ಕಾರುಬಾರು ನೆಲ ಮಹಡಿಯಲಿ ಇವನ್ಯಾರ ಮಗನೆಂದು ನೋಡಿಹರು ಬೆರಗಿನಲಿ ಇವನಂತ ಸಿರಿವಂತ ಇನ್ಯಾರಿಹರು ಈ ಜಗದಲಿ ಮಂಕೆ ಕನಸು ಕಂಡರೆ ಏನೂ ಸಿಗದು ಜಗದಲ್ಲಿ ಶ್ರಮಪಟ್ಟರೆ ಮಾತ್ರ ಸುಖವುಂಟು ಬದುಕಿನಲ್ಲಿ
----------------------------------
ನೋಂದಣಿ ಐಡಿ : KPFS2-8402