Submission 4804

ನಗುತಾ ಇದ್ದು ಬಿಡು

ರಚನೆ : ಜ್ಯೋತಿ ರಾಜಶೇಖರ್

----------------------------------

ನಗುತ ಇದ್ದರೆ ನಗುವು ನಗಿಸುವುದು, ಅಳುತ ಇದ್ದರೆ ಅಳುವು ಅಳಿಸುವದು, ನಗುವು ಇರಬೇಕು ಅಳುವು ಇರಬೇಕು ಅಳುವ ಅಳಿಸಿ ನಗುತ ಬಾಳಬೇಕು. ಇರುವುದು ಖಚಿತವಲ್ಲ ಎನ್ನುತ ಬಾಳುವ, ದೀಪದತ್ತ ದಾರಿ ಎಂದು ಸಾಗತ ನಡೆವ, ಎಲ್ಲರೂಳಗೊಂದಾಗಿ ಇದ್ದು ಜೀವಿಸುವ, ನಗುವಿಗಿಂತ ಆಭರಣ ಬೇರೆಯಿಲ್ಲ ಎನ್ನವ. ಇರುವ ತನಕ ನನ್ನಂತೆ ನಾ ಜೀವಿಸುವ, ಅವರವರ ಜೀವನ ಅವರದೆನ್ನುವ, ಹೋಲಿಕೆಯ ಗೊಜು ಬೇಡವೆನ್ನುವ, ಕೆಡುಕು ಮಾಡದೆ ಒಳಿತು ಬಯಸುವ. ಸಂಸ್ಕೃತಿ ಸಂಪ್ರದಾಯವ ಮುನ್ನೆಡೆಸುವ, ಕಟಕಟೆಯ ಕಂದಾಚಾರವ ಬದಿಗೊತ್ತುವ, ವಿಜ್ಞಾನದ ದೃಷ್ಥಿಕೋನದತ್ತ ನಗುತ ಸಾಗುವ.

----------------------------------

ನೋಂದಣಿ ಐಡಿ : KPFS2-8383

315
Votes
1,656
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top