Submission 4729

ವೇಶ್ಯೆಯೋರ್ವಳ ಅಂತರಾಳ

ರಚನೆ : ಶ್ರದ್ಧಾ ಮುದ್ಲಗಿರಿ

----------------------------------

ಅರಿಶಿಣವ ಮೈಗೆ ಹಚ್ಚೋರಿಲ್ಲ, ಕುಂಕುಮದ ಆರತಿಯು ಎನಗಿಲ್ಲ. ಮುತ್ತೈದೆಯಾಗಿ ಬಾಳೆoದು ಹರಸುತ್ತಾ ಬಳೆಗಳನು, ನನ್ನ ಕರಗಳಿಗ್ಯಾರೂ ತೊಡಿಸೋರಿಲ್ಲಾ. ಇನಿಯನ ಪ್ರೇಮವೆಂದೂ ನಿನ್ನ ಪಾಲಿಗಿರಲೆಂದು, ಹಾರೈಸುವವರ್ಯಾರೂ ನನಗಿಲ್ಲ. ಕಾಡಿಗೆಯ ಬೊಟ್ಟಿಟ್ಟು ಕೆಟ್ಟ ದೃಷ್ಟಿಯು, ಕಾಡದಿರಲೆಂದು ಹರಸೋರಿಲ್ಲ. ಮಲ್ಲಿಗೆಯ ಮುಡಿಗಿರಿಸಿ ಒಲವ ಘಮವು ನಿನ್ನ, ಜನುಮದುದ್ದಕ್ಕೂ ಇರಲೆಂದು ಬಯಸೋರಿಲ್ಲ. ಮದುಮಗಳಂತೆ ಸಿಂಗಾರಗೊಂಡಿರುವೆ, ಮುದ್ದಿಸುವವನೆನ್ನ ಪತಿಯಲ್ಲ. ವೇಶ್ಯೆಯೆಂದೇ ಕರೆಯುವುದು ಜಗವೆಲ್ಲಾ, ನಾನೂ ಒಂದು ಹೆಣ್ಣೆಂದು ಅರಿತೋರೆ ಇಲ್ಲಾ.

----------------------------------

ನೋಂದಣಿ ಐಡಿ : KPFS2-8325

0
Votes
124
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top