Submission 4695

ತಲಕಾಡು

ರಚನೆ : ದೀಪಾ ಶ್ರೀಕಾಂತ ಗಾಣಿಗಿ

----------------------------------

ಇತಿಹಾಸ ಕಾಲದಲಿ ಮೆರೆದ ಚೋಳರ ಸೊಗಡು. ಸುತ್ತಲೂ ನೆರೆದಿದೆ ಹಸಿರೆಲೆಯ ಕಾಡು. ಚಿಲಿ ಪಿಲಿ ಹಕ್ಕಿಗಳ ಸುಮಧುರ ಹಾಡು. ಬೆಚ್ಚನೆಯ ಹಾಸಿಗೆಯ ಮರಳಿನ ಸೂಡು. ಹಿಂದೂ ದೇಗುಲಗಳ ಶಿಲ್ಪಕಲೆಯ ಬೀಡು. ಪ್ರೀತಿ ಹಕ್ಕಿಗಳಿಗೆ ಹೆಸರಾದ ಆಸರೆಯ ಗೂಡು. ಕಣ್ಣಕುಕ್ಕೋ ಸಾಗರದ ದಡದಲಿ ಒಮ್ಮೆ ಈಜಾಡು. ನೆಲೆಯನ್ನು ಊಳಿಸಿಕೊಳ್ಳಲಾಗದ ಶ್ರೀರಂಗನ ಪಾಡು. ಚಾಮರಾಜ ಒಡೆಯನ ಸೇನೆ ಕಿತ್ತುಕೊಂಡಿತು ಆಭರಣದ ಜೋಡು. ಅಲವೆಲಮ್ಮನ ಕೋಪಕ್ಕೆ ಆಯಿತು ಸುಡುಗಾಡು. ಶಾಪಕ್ಕೆ ಗುರಿಯಾಗಿ ಒಡೆಯರ ದತ್ತುಪುತ್ರನ ಹುಡುಕಾಡು. ಜೀವ ಹೋಗುವುದರೊಳಗೆ ನೀನೊಮ್ಮೆ ಬಂದು ನೋಡು. ಕಳೆದು ಹೋಗದ ಹಾಗೆ ಸಂರಕ್ಷಿಸಿ ಕಾಪಾಡು. ಅದುವೇ ನಮ್ಮ ಸರ್ವಶ್ರೇಷ್ಠ ತಲಕಾಡು.

----------------------------------

ನೋಂದಣಿ ಐಡಿ : KPFS2-8304

111
Votes
513
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top