ಸಾಂಗತ್ಯ
ರಚನೆ : ವಾಣಿ ಸುಹಾಸ ಹೆಗಡೆ
----------------------------------
ಹೊಸ ಕನಸು ಹೊಸ ಪರಿಚಯ ಹೊಸ ಜಾಗ..ಹೊಸ ಅನುಭವಗಳೊಂದಿಗೆ. ಕೈ ಹಿಡಿದು ಹೊಸ್ತಿಲ ದಾಟಿ ಕಾಲಿಟ್ಟಾಗ ಮನಸಲಿ ಏನೋ ಕಳವಳ ಅರಿತೆ ನೀನು ನನ್ನ ಅಂತರಾಳ ಅಳಿಸಿದೆ ಮನದ ದುಗುಡಗಳ ಅಂದು ನೀ ಕೊಟ್ಟ ಧೈರ್ಯ ಮನದಲಿ ತುಂಬಿತು ಸ್ಥೈರ್ಯ ಹೊಸತರಲ್ಲಿ ಆಲೋಚನೆಗಳು ಬೇರೆ ಬೇರೆ ಹುಸಿ-ಮುನಿಸು , ಜಗಳಗಳು ಬೇಕಷ್ಟು ಆದರೂ ಇವೆಲ್ಲವುಗಳ ಮೀರಿದ ಬಂಧ ಜನುಮ ಜನುಮದ ನಮ್ಮ ಈ ಅನುಬಂಧ ನೀ ಇರಲು ಜೊತೆಯಲ್ಲಿ ಬೇರೇನು ಬೇಕಿಲ್ಲ ಬಾಳಲ್ಲಿ. ನಿನ್ನ ಸಾಂಗತ್ಯ ನನ್ನ ಪುಣ್ಯ
----------------------------------
ನೋಂದಣಿ ಐಡಿ : KPFS2-8303