ಆನಂದ ಅಮೃತ
ರಚನೆ : ಪ್ರಸಾದ್ ಶೆಟ್ಟಿ ಬಿ
----------------------------------
ನಿನ್ನೆಯ ಶೋಕ ,ಇಂದಿನ ಮೋಹ, ನಾಳೆಯ ಚಿಂತೆಯ ಬಿಟ್ಟು ಬಿಡು ನಗುನಗುತಾ ಖುಷಿಯಲಿ. ಕೊನೆವರೆಗೂ ಇದ್ದುಬಿಡು. ಶರೀರ ಭಾವನೆ ತ್ಯಜಿಸಿ ಆತ್ಮನಿಗೆ ಶರಣಾಗಿ, ಇಂದ್ರಿಯ ವಿಷಯಗಳ ವೈರಾಗ್ಯ ತಾಳಿ ಬಿಡು. ನಿಸ್ವಾರ್ಥ ಸೇವೆ ಗೈಯುತ ಕಷ್ಟ ನಷ್ಟಗಳಲ್ಲಿ ಸ್ಥಿತಪ್ರಜ್ಞನಾಗಿಬಿಡು. ಸರಳ ಸಾತ್ವಿಕ ಜೀವನ ನಡೆಸಿ ಬಿಡು. ನಿರ್ಮಲ, ನಿಶ್ಚಲ, ವಿಶಾಲಮನದಿ ಮಹಾನ್ ವ್ಯಕ್ತಿ ಯಾಗಿ ಬಿಡು. ನಿರಂತರ ಚೈತನ್ಯ ಸ್ಪೂರ್ತಿಯ ಹೆಚ್ಚಿಸಲು, ಭಗವದ್ಗೀತೆಯ ಶ್ರೀ ಕೃಷ್ಣ ತೋರಿದ ದಾರಿಯಂತೆ ಅರ್ಜುನನ ಹಾಗೇ ಬದುಕಿ ಬಿಡು
----------------------------------
ನೋಂದಣಿ ಐಡಿ : KPFS2-8253