Submission 4586

ಜನನಿ

ರಚನೆ : ಶುಭ ರಾಘವೇಂದ್ರ ರಾಯ್ಕರ್

----------------------------------

ಸೋಲೊಪ್ಪದ ಸೋಲೇ ಕಾಣದ ಜೀವವಿಂದು ಸೋಲುತಿದೆ.ಮುಪ್ಪೆಂಬುವ ಸುಳಿಯೊಳು ಸಿಲುಕಿ ಕಷ್ಟದಲೂ ಕುಗ್ಗದೇ, ನಿಂದನೆಗೂ ಜಗ್ಗದೇ, ಸಂಸಾರವೆಂಬ ರಥಕೆ ಸಾರಥಿಯಾಗಿ ನಿರ್ದಿಷ್ಟ ಪಥದಲ್ಲಿ ಸಾಗಿ ಉದ್ದೇಶಿತ ಗುರಿಯನ್ನು ತಲುಪಿ. ಸೋಲುತಿದೆ ಇಂದು ಮುಪ್ಪೆಂಬ ಸುಳಿಗೆ ಸಿಲುಕಿ. ಸಾಗರದ ಅಲೆಗಳ ಅಬ್ಬರಕ್ಕೂ ಭಯಪಡದೆ ಮಿಂಚು, ಗುಡುಗು,ಮಳೆಯನ್ನೂ ಲೆಕ್ಕಿಸದೆ ಸಂಸಾರವೆಂಬ ದೋಣಿಯೊಳು ಅಂಬಿಗನಂತೆ ತನ್ನವರನ್ನೆಲ್ಲಾ ನಗುಮೊಗದಿ ದಡ ಸೇರಿಸಿ ಸೋಲುತಿದೆ ಇಂದು ಮುಪ್ಪೆಂಬ ಸುಳಿಗೆ ಸಿಲುಕಿ.

----------------------------------

ನೋಂದಣಿ ಐಡಿ : KPFS2-8220

1
Votes
160
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top