Submission 4248

ಭಾವ ತಾರಿಣಿ

ರಚನೆ : ಪುನೀತ್ ಎಸ್ ಪಾಳೇಕರ್

----------------------------------

ಎನ್ನೆದೆಯ ಭಾವ ವೀಣೆಯ ಮೀಟುತ ಒಲವನು ಬೆರೆಸುತ ರಾಗವ ನುಡಿಸಿದೆ ಇನಿದನಿಯ ಮೆಲ್ಲುಸಿರಲಿ ಗುನುಗುತ ಜೀವ ಝೇಂಕಾರಕೆ ಆನಂದ ನೀಡಿದೆ ಕೈ ಬಳೆಯ ಸದ್ದಿಗೆ ಮಾಧುರ್ಯ ಬೆರೆಸಿ ಮಧುರ ಗಾಯನವ ಮಾರ್ಧನಿಸಿದೆ ಕಾಲ್ಗೆಜ್ಜೆಯ ನಾದಕೆ ತಾಳವ ಸೇರಿಸಿ ಹೃದಯದ ಮಿಡಿತವ ನೂರ್ಮಡಿಸಿದೆ ಹೆರಳ ಹರಡಿದ ಕುಮುದ ಕಪೋಲ ರಾಣಿ ಸೌಮ್ಯ ನಯನದ ಚಿತ್ತ ಕದಡುವ ರಮಣಿ ನೀ ಎನ್ನ ಹೃದಯ ಮಂಟಪದ ವೀಣಾಪಾಣಿ ಕಾವ್ಯ ಸಮ್ಮೋಹಕೆ ತರಂಗ ನೀ ಭಾವ ತಾರಿಣಿ

----------------------------------

ನೋಂದಣಿ ಐಡಿ : KPFS2-7950

57
Votes
381
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top