Submission 4184

ಸುಮ್ಮನ್ನಿದ್ದುಬಿಡು

ರಚನೆ : ಶಿವಕುಮಾರ್ ಆರ್

----------------------------------

ಮಾತುಗಳೂರಿನಲ್ಲಿಂದು ಮೌನದ ಜಾತ್ರೆ ನೀನೇನನ್ನೂ ನುಡಿಯಬೇಡ ಸುಮ್ಮನ್ನಿದ್ದುಬಿಡು, ಬಿಗುಮೊಗದ ಯಾವ ಮೂಲೆಯಲ್ಲೂ ನಸುನಗುವಿಗೆ ಸ್ಥಳವಿಲ್ಲ!, ಕಂಬನಿಯೂ ಇಲ್ಲ!, ವಿವರಣೆಗಳೇಕೆ? ಬೇಡಬಿಡು.. ಸುಮ್ಮನೊಮ್ಮೆ ಪಕ್ಕದಲಿ ಕುಳಿತುಬಿಡು ಸಾಕು ಕಣ್ಣ ದಿಟ್ಟಿಸಬೇಡ, ಹೆಗಲ ನೇವರಿಸಲೂ ಬೇಡ ಸುಂದರ ಘಳಿಗೆಗಳು ಮೌನದಾಹುತಿಯಾಗಲಿ ನೀ ಹೀಗೆ ಸುಮ್ಮನ್ನಿದ್ದುಬಿಡು..!!

----------------------------------

ನೋಂದಣಿ ಐಡಿ : KPFS2-7906

62
Votes
345
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top