Submission 4182

ಮಧ್ಯಮ ವರ್ಗದ ಬದುಕು

ರಚನೆ : ರಾಧಿಕಾ ಮೇಸ್ತಾ

----------------------------------

ಕಲ್ಪನೆಯ ಕಲೆಗೆ ಲೇಖನಿಯ ಪರದಾಟ ಆಕಾರ ಕಲ್ಪಿಸಲು ಜಾಗದ ಹುಡುಕಾಟ.. ಸಾಧಿಸಲು ಛಲ ನೂರು ಮುನ್ನುಗ್ಗಿಸಲು ಗುರು ಯಾರು? ಇರುವುದೆಲ್ಲವ ಬಿಟ್ಟು ಓಡಲು ದಾರಿ ಕಾಣದಾಗಿದೆ ಮಧ್ಯಮ ವರ್ಗದ ಒಡಲು ಜಂಜಾಟವೇ ಹಾಗಿದೆ ಮನದೊಳಗಿನ ಚಿತ್ರಣವ ಸುತ್ತಲೂ ಹರಡಲು ಬಾನಿಗೆ ಹಾರುವ ಹಂಬಲ ಕರ್ತವ್ಯದ ಭಾರವ ರೆಕ್ಕೆಗೆ ಕಟ್ಟಿರಲು ಕುಸಿದಿದೆ ಹೃದಯದ ಬಲ ಸ್ರಜನಶೀಲದ ಭಾವ ಬೆನ್ನು ತಟ್ಟುವವರಿಲ್ಲ ಸಾವಿರ ಕಲೆ ಕೊಟ್ಟ ಶಿವ ಕೈಯ ಹಿಡಿಯಲೇ ಇಲ್ಲ

----------------------------------

ನೋಂದಣಿ ಐಡಿ : KPFS2-7905

118
Votes
609
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top