ನನ್ನದೊಂದು ಆಸೆ
ರಚನೆ : ಡಾ. ನಿಶ್ಚಿತಾ ಬಿ ಎಂ
----------------------------------
ಓಡುತ್ತಿರುವ ಗಡಿಯಾರಕ್ಕೆ ಬುದ್ದಿ ಹೇಳಿ ನಿಲ್ಲಿಸುವ ಆಸೆ, ತಿರುಗುತಿರುವ ಭೂಮಿಗೆ ನಮಸ್ಕರಿಸಿ, ನೀ ತಿರುಗಬೇಡ ಎಂದು ಹೇಳುವ ಆಸೆ, ಬಿಟ್ಟು ಹೋದವರನ್ನ ಮರೆಯ ಬೇಕೆಂಬ ಆಸೆ, ನೆನಪಿನ ಕಂತೆಯನ್ನೇ ಬಿಸಾಡಬೇಕೆಂಬ ಆಸೆ, ಆದರೂ, ತಿರುಗಿ ಒಮ್ಮೆ ನೋಡು ಎಂದು ಕೇಳುವ ಆಸೆ, ಮರಳಿ ನನ್ನ ಹಳೆಯ ದಿನಗಳಿಗೆ ಹೋಗುವ ಆಸೆ, ಆಸೆ ಅಷ್ಟೇ. ಎಂದು ನೆನೆದು ನಗಲೆ , ವಾಸ್ತವ ಇದೆ ಎಂದು ತಿಳಿದು ಅಳಲೆ, ಮುಗಿಯದ ನನ್ನದೊಂದು ಆಸೆ
----------------------------------
ನೋಂದಣಿ ಐಡಿ : KPFS2-7902