Submission 4176

ಅಮ್ಮ

ರಚನೆ : ನಾಗಲಾಂಬಿಕಾ

----------------------------------

ನಾ ಎಲ್ಲಿರಲಿ ಹೇಗಿರಲಿ ನೆನೆಯುವ ನಿನ್ನನ್ನೆ ಅಮ್ಮ ನೋವಿರಲಿ ನಲಿವಿರಲಿ ಜೀವನದ ಪುಟ ಪುಟದಲ್ಲಿ ನಿನ್ನ ಬಯಸುವೆ ಅಮ್ಮ ನಾನಿರಬಹುದು ನಿನ್ನ ಬಿಟ್ಟು ದೂರ ಆದರೆ ಈ ಜೀವಕ್ಕೆ ನೀನೇ ಆಧಾರ ಇರಬಹುದು ನೀನು ಎಲ್ಲರಂತೊಬ್ಬಳು ಆದರೆ ನನ್ನ ಬಾಳಿಗೆ ನೀನೇ ಬೆಳಕು.. ನಿನ್ನ ಮಗಳೆನ್ನಲು ಹೆಮ್ಮೆ ನನಗೆ ಆದರೆ ಜೀವ ಬಯಸುತ್ತಿದೆ ನೀ ನನ್ನ ಅಮ್ಮನೆಂದು ಕೇಳುವ ಭಾಗ್ಯಕ್ಕೆ ನನ್ನಿಂದಾಗದೆಂದು ನಾ ಕುಳಿತಾಗ ನೆನೆಯುವೆ ನಿನ್ನ ಜೀವನದ ಹಿಗ್ಗು ತೊಗ್ಗುಗಳಿಗೆ ಲೆಕ್ಕಿಸದೆ ಮುನ್ನುಗಿದ ಆ ಜೀವವ ನನ್ನಗೆ ನೀಡುವೆ ಹೊಸ ಹರುಷ ನೀನು ಅಮ್ಮ

----------------------------------

ನೋಂದಣಿ ಐಡಿ : KPFS2-7901

40
Votes
306
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top