ಕನ್ನಡದ ಕಾವ್ಯಮಾಲೆ
ರಚನೆ : ಡಿ ಶ್ವೇತಾರಾಣಿ
----------------------------------
ಕನ್ನಡ ಕೇವಲ ನುಡಿಯಲ್ಲ, ಆತ್ಮದ ಅರಿವು, ಮನದ ಮಣ್ಣಲ್ಲಿ ಮೊಳಗಿದ ಅಕ್ಷರದ ದಿವ್ಯ ಸತ್ಯವು ಕಾವ್ಯದ ಕಣಿವೆಗಳಲ್ಲಿ ಅರಳಿದ ಸುಗಂಧ ಹೂವು, ಪ್ರತಿಯೊಂದು ಸಾಲಿನಲ್ಲಿ ಹರಡಿದೆ ಸಂಸ್ಕೃತಿಯ ಮಾವು ಪಂಪನ ಪದ್ಯ, ಬಸವನ ಭಾವ, ಕುವೆಂಪು ಕನಸು, ಕನ್ನಡದ ಕರಗತ ಕಾವ್ಯ — ಅಮೃತದ ಸೊಗಸು ಅಕ್ಷರದ ಅರಣ್ಯದಲ್ಲಿ ಬೆಳಕಾದ ಕನ್ನಡದ ದೀಪ, ಸಾವಿರ ವರ್ಷಗಳ ಇತಿಹಾಸದ ಭೋರ್ಗರೆವ ಧೂಪ ಕನ್ನಡ ನುಡಿ ನಮ್ಮ ನಾಡಿನ ನಾಡಿಯ ಸ್ಪಂದನೆ, ಸಾಹಿತ್ಯದ ನದಿ, ಸಂಸ್ಕೃತಿಯ ಹಿರಿಮೆಗೆ ವಂದನೆ ಪದಗಳ ಪೆನ್ನಿನಿಂದ ಹರಿದುಬರುತ್ತದೆ ಇತಿಹಾಸ, ಮಣ್ಣಿನ ಪರಿಮಳದೊಳಗೆ ಬೆಳೆಯುತ್ತದೆ ಕಾವ್ಯ ವಿಶ್ವಾಸ ನಾವು ಬರೆಯುವುದು ಕೇವಲ ಪದ್ಯವಲ್ಲ, ಪಾರಂಪರ್ಯದ ಪ್ರಾರ್ಥನೆ, ಕನ್ನಡವೇ ನಮ್ಮ ಕಾವ್ಯ
----------------------------------
ನೋಂದಣಿ ಐಡಿ : KPFS2-7865