Submission 4128

ದೇಶ ಪ್ರೇಮ

ರಚನೆ : ದತ್ತಾತ್ರಯ ಕುಲಕರ್ಣಿ

----------------------------------

ಭಾರತಾಂಬೆ ನಿನ್ನ ಗರಿಮೆ, ಗಗನ ಶಿಖರಕೇರಲಿ, ಉತ್ತುಂಗದಿ ಮೆರೆಯಲಿ ಜಾತಿ ಮೀಸಲಾತಿ ಯಂಬ ತರ್ಕವಿರದ ಭಾವ ತೊರೆದು, ವಿದ್ಯೆ ಬುದ್ಧಿ ಬೆಳೆಸುವಂಥ ಧಾರಣೆ ನಮಗಿರಲಿ. ಜಾತಿ ಮತದ ಭೇದ ತೊರೆದು, ಮೇಲು ಕೀಳೆನದೆ ಮೆರೆದು, ಭವ್ಯ ನಾಡ ಕಟ್ಟುವಂಥ, ಧೋರಣೆಯೊಂದಿರಲಿ ಯಾವ ಭಾಷೆಯಾದರೇನು ಭಾವ ಒಂದೆ ಯಾವ ನಾಮ ನೆನೆದರೇನು, ದೇವರೊಂದೆ ಎನಿಸಲಿ. ಭಾರತೀಯರಾಗಿ ನಾವು, ಐಕ್ಯ ಭಾವ ತೋರಲಿ ಓದು ಪ್ರಮುಖವಾಗಲಿ, ದುಡಿಮೆ ದೈವವಾಗಲಿ. ಮಕ್ಕಳಲ್ಲಿ ದೇಶ ಪ್ರೇಮ ಮೊದಲ ಪಾಠವಾಗಲಿ ದ್ರುಷ್ಟ ಶಕ್ತಿ ಕೆಣಕದಂಥ, ಪ್ರಜ್ಞೆಯೊಂದು ಮೂಡಲಿ. ವಿಶ್ವದಲ್ಲಿ ನಮ್ಮ ದೇಶ, ಶಾಂತಿಯನ್ನು ಸಾರಲಿ ಭೇದ ಭಾವ ತೊರೆದು ನಮ್ಮ ಙಾನ ಜ್ಯೋತಿ ಬೆಳಗಲಿ, ನಮ್ಮೆಲ್ಲರ ಶಿಸ್ತಿನಿಂದ, ದೇಶದ್ ಹಿರಿಮೆ ಹೆಚ್ಚಲಿ.

----------------------------------

ನೋಂದಣಿ ಐಡಿ : KPFS2-7864

39
Votes
339
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top