ಕನ್ನಡ ಕಸ್ತೂರಿ
ರಚನೆ : ರೋಜಾ ಹೆಚ್. ಡಿ
----------------------------------
ಅಲ್ಲೊಂದಿತ್ತು ಸಿರಿ ಕನ್ನಡ ಶ್ರೀ ಗಂಧಧ ನಾಡು ನಿತ್ಯ ಹಸಿರಿನ ಹರಿದ್ವರ್ಣದ ಬೀಡು ಧುಮುಕುವ ಸಾಗರದ ಗೇರುಸೊಪ್ಪೆಯ ಸಿರಿ ಹರಿಯುತ್ತಿದ್ದಳು ಮಮತೆಯ ಜೀವನದಿ ಕಾವೇರಿ ಪಲ್ಲವರನು ಗೆದ್ದ ಕದಂಬ ಮಯೂರವರ್ಮನ ಉಸಿರು ನಾಟ್ಯರಾಣಿ ಶಕುಂತಲೆ ನಲಿದ ಚನ್ನಕೇಶವನ ತವರು ಸಾಹಿತ್ಯಕ್ಕೆ ಕಿರೀಟವನ್ನಿಟ್ಟರು ಕವಿವರೇಣ್ಯರು ಸಂಗೀತಕ್ಕೆ ಸ್ವರಗಳಾದರು ದಾಸಶ್ರೇಷ್ಟರು ವಚನಗಳಾದವು ಜೀವನ ತತ್ವ ತಿಳಿಸುವ ಕೈಪಿಡಿ ಶುರುವಾಯಿತು ಕನ್ನಡದ ಔನ್ನತ್ಯಕ್ಕೆ ಮುನ್ನುಡಿ ಕನ್ನಡ ಕಸ್ತೂರಿ ತನ್ನ ಕಂಪ ಬೆರೆಸಿತು ಭೇದವಿಲ್ಲದೆ ಎಲ್ಲರ ಒಗ್ಗೂಡಿಸಿತು ಕನ್ನಡಾಂಬೆಯಾದಳು ನಿತ್ಯ ಸಮಂಗಲ ಉಳಿಯಲಿ ಸಿರಿಗನ್ನಡ ಚಿರಕಾಲ!
----------------------------------
ನೋಂದಣಿ ಐಡಿ : KPFS2-7814