Submission 4058

ನಿನ್ನ ನೆನಪಿನ ನಿಶ್ಶಬ್ದ

ರಚನೆ : ಸುಧೀರ್

----------------------------------

ರಾತ್ರಿಯ ಮೌನದಲ್ಲಿ, ನಿನ್ನ ಹೆಸರೇ ಶಬ್ದವಾಗುತ್ತದೆ, ಹೃದಯದ ತಂತಿ ಮುಟ್ಟಿದಾಗ, ನಿನ್ನ ನೋಟವೇ ನಿನ್ನಿಗಿಂತ ಹತ್ತಿರವಾಗುತ್ತದೆ. ನಿನ್ನ ಕಣ್ಣುಗಳಲಿ ಒಮ್ಮೆ ನೋಡಿದೆ ಅಲ್ಲಿ ಪ್ರೀತಿ ಉರಿಯುತಿತ್ತು, ಆ ಉರಿ ನನ್ನ ಮನದ ಹಿಮವನ್ನೆಲ್ಲ ಕರಗಿಸಿತು, ಆದರೆ ಉಳಿದದ್ದು ಬಿರುಕು ಬಿದ್ದ ಹೃದಯ. ನಿನ್ನ ಹತ್ತಿರ ಇರೋ ಕನಸು ಪ್ರತಿ ದಿನ ಹತ್ತಿರ ಬಂದು ದೂರ ಹೋಗುತ್ತದೆ, ನಿನ್ನ ಮಾತು ಕೇಳದ ಕಿವಿ ಇನ್ನೂ ಆ ಧ್ವನಿಯ ಪ್ರತಿಧ್ವನಿಯಲ್ಲಿ ಬದುಕುತ್ತದೆ.

----------------------------------

ನೋಂದಣಿ ಐಡಿ : KPFS2-7815

0
Votes
122
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top