ರಾಜರು ರಾಜಕೀಯದ ಗುಲಾಮರು.
ರಚನೆ : ಎಚ್ ಎಂ ಶಿವುಮನ
----------------------------------
ಎಲ್ಲಿದಿಯೋ ಪ್ರಜಾಪ್ರಭುತ್ವ? ಎಲ್ಲಿದಿಯೋ ಪ್ರಜಾಪ್ರಭುತ್ವ? ಪ್ರಜೆಗಳಾದ ನಾವುಗಳೇ ರಾಜರು ಆದರೆ ಆಗುತ್ತಿದ್ದೇವೆ ಗುಲಾಮರು ರಾಜಕೀಯದ ಗುಲಾಮರು.. ನಾವು.. ರಾಜರು ರಾಜಕೀಯದ ಗುಲಾಮರು ಮತಭಿಕ್ಷೆ ಬೇಡಲು ಬಂದವನು ನಮ್ಮ ಭಿಕ್ಷೆಯಿಂದ ಗೆದ್ದವನು ಕಷ್ಟಗಳ ಪರಿಹರಿಸಲು ಬಾರದೆ ಹೋದವನು. ಜನನಾಯಕನೆಂದು ನೀ ಅಂದುಕೊಂಡಿರುವೆ ಜನಸೇವಕನೆಂದು ನೀ ಮರೆತಿರುವೆ. ಆಮಿಷದ ಸುಳಿಯಲ್ಲಿ ಸಿಕ್ಕಿರುವ , ಆಟದ ಬೊಂಬೆಗಳಂತೆ ತನ್ನವರು, ನನ್ನವರೆಂದು ಮತ ಹಾಕಿದ ನಾವು ನೀಬಿಟ್ಟ ಗಾಳಕ್ಕೆ ಕುಣಿಯುವವರಾಗಿದ್ದೇವಲ್ಲಾ ನಾವು.. ರಾಜರು ರಾಜಕೀಯದ ಗುಲಾಮರು
----------------------------------
ನೋಂದಣಿ ಐಡಿ : KPFS2-7793