Submission 3948

ಮಡಿಲು

ರಚನೆ : ರಂಜಿತಾ ಬಿ ಕೆ

----------------------------------

ಮನವೀಗ ಮಡಿಲ ಬಯಸಿದೆ ಅಮ್ಮನ ಮಡಿಲಲ್ಲಿ ಮಗುವಾಗ ಬೇಕೇನಿಸಿದೆ ಮಮತೆಯ ಸಾಗರದಲ್ಲಿ ಮೀನಾಗಿ ತೇಲುವ ಆಸೆಯಾಗಿದೆ ಆದರೆ ಸಾಗರವೇ ಬರಿದಾಗಿದೆ ಮಡಿಲೇನೆ ಮಾಯವಾಗಿದೆ..... ಮಾತು ಕಲಿಸಿದ ಮಾತೇನೇ ಮಾಯವಾದರೆ ಮನದ ಮಾತು ಹೇಳಲು ತುಂಬಾ ತೊಂದರೆ ಆವಿಯಾಗಿದೆ ಅಮ್ಮನ ಆಸರೆ ನಿನ್ನ ಆಶೀರ್ವಾದವೇ ನನಗೆ ಭರವಸೆ ಕರುಣೆಯ ಕಡಲು ಕಾಣದಿರಲು ಬದುಕಿಗೆ ಬಡಿಯಿತು ಸಿಡಿಲು ನೀನಿದ್ದಾಗ ಮನೆಯಾಗಿತ್ತು ನಂದನ ವನ ಈಗ ಅಲ್ಲಿ ಬರೀ ನೀರವ ಮೌನ ಮತ್ತೆ ಮತ್ತೆ ಮನ ಬಯಸುತ್ತಿದೆ ನಿನ್ನ ಮಡಿಲನ್ನ

----------------------------------

ನೋಂದಣಿ ಐಡಿ : KPFS2-7717

0
Votes
133
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top