Submission 3944

ತ್ಯಾಗಮಯಿ ತಾಯಿ

ರಚನೆ : ತೇಜಸ್ ಲೋಕಪೂರ್ಣ

----------------------------------

ಒಂಬತ್ತು ತಿಂಗಳು ಒಡಲಲ್ಲಿ ಹೊರುವಳು ಕೊಡುವಳು ಜನ್ಮ ಕತ್ತರಿಸಿ ಕರುಳು ಮರೆವಳು ಮಗು ನೋಡಿ ತನ್ನೇಲ್ಲ ಅಳಲು ಗಂಡನ ಮಾತಿಗೆ ಸರಿ ಎನ್ನೋ ಮಡದಿ ನೆಡೆಸುವಳು ಬಾಳ ರಥವ ಸುಕದಿ ಮರೆ ಮಾಡಿ ಬಿಟ್ಟಿಹಳು ತನ್ನೆಲ್ಲ ಕನಸುಗಳ ಸಂಸಾರ ನೊಗಕ್ಕೆ ಕೊಟ್ಟಿಹಳು ಕೊರಳ ದುಡಿಯುವಳು ಹಗಲಿರುಳು ಮಕ್ಕಳ ಸುಖಕೆ ನಗುವೇ ಆಭರಣ ಈ ತಾಯ ಮುಖಕೆ ಕೊರತೆ ಎಂಬುದೆ ಇಲ್ಲ ತಾಯಿ ಇದ್ದ ಮನೆಗೆ ಈ ಭವ್ಯ ಪ್ರಕೃತಿಗೆ ಅವಳೊಂದು ಕೊಡುಗೆ ಪಂಜರದ ಗಿಳಿಯಂತೆ ನೆಲೆಯೂರಿ ಬಿಟ್ಟಿಹಳು ಎಂದೆಂದು ಅವಳಲ್ಲೆ ಪಾರಾಗದವಳು ಅವಳಂತೆ ಯಾರಿಲ್ಲ ಓಲೈಕೆ ಜಗದಲ್ಲಿ ಮುಕ್ಕೋಟಿ ದೈವಗಳೆ ಅಡಗಿಹೆವು ಇವಳಲ್ಲಿ

----------------------------------

ನೋಂದಣಿ ಐಡಿ : KPFS2-7712

0
Votes
145
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top