ಕರುನಾಡು
ರಚನೆ : ಶ್ರುತಿ ಟಿ.ಪಿ.
----------------------------------
ಕಾವೇರಿಯಿಂದ ಗೋದಾವರಿವರೆಗಿರ್ದ ನಾಡು ತಾಯಿ ಕಾವೇರಿಯು ಉದಯಿಸುವ ನಾಡು ಕಣ್ಮನ ಸೆಳೆಯುವ ಸಹ್ಯಾದ್ರಿಯ ನೆಲೆಬೀಡು ಅನೇಕಾನೇಕ ವೈಭವಗಳ ನಾಡು ಈ ಕರುನಾಡು ಗಂಗ-ಕದಂಬರು ಶೌರ್ಯದಿ ಆಳಿದ ನಾಡು ಚಾಲುಕ್ಯ ರಾಷ್ಟ್ರಕೂಟರ ನೆಚ್ಚಿನ ನಾಡು ಹೊಯ್ಸಳರ ಶಿಲ್ಪಕಲೆಗೆ ಸಾಕ್ಷಿ ಈ ಬೀಡು ವರ್ಷಾನುವರ್ಷಗಳ ಇತಿಹಾಸದ ಕರುನಾಡು ದಾಸ ಸಾಹಿತ್ಯವ ಎಲ್ಲೆಡೆ ಹರಡಿದ ನಾಡು ಸಂತ-ಶರಣರು ಹರಸಿದ ಪುಣ್ಯದ ನಾಡು ದಾರ್ಶನಿಕರ ದೂರದೃಷ್ಟಿಯ ಫಲ ನಾಡು ತ್ಯಾಗ-ಪರಿಶ್ರಮಗಳ ಪ್ರತಿಫಲ ಈ ಕರುನಾಡು
----------------------------------
ನೋಂದಣಿ ಐಡಿ : KPFS2-7697