Submission 3874

ಅನುರಾಗದ ಅಲೆಯಲಿ

ರಚನೆ : ಶ್ರೀನಿವಾಸ್ ಕೆ ವಿ

----------------------------------

ಒಂದೇ ಒಂದು ಮಾತ ಕೇಳೆ ನನ್ನ ಜೊತೆ ಬಾಳ ಬಾಳೆ ಬಾಳಿನಲ್ಲಿ ಬೆಳಕ ತಾರೆ ನನ್ನ ಅರಸಿಯೇ ಮೆಲ್ಲ ಮೆಲ್ಲ ಹೃದಯ ಸೇರೆ ಹೃದಯದಲ್ಲಿ ನರ್ತಿಸು ಬಾರೆ ನರ್ತನೆಗೆ ನಾ ಸೋತೆನು ತಾರೆ ನಿನಗಾಗಿಯೇ ಬಂದೆನು ಬಾರೆ ಮೆಲ್ಲಮೆಲ್ಲನೆ ಬಳಿ ಸೇರಲಾ? ಪ್ರೀತಿಯಿಂದ ನಾ ಮುದ್ದಾಡಲ? ಕಣ್ಣ ಅಂಚಲೇ ಕಾಪಾಡಲಾ? ನನ್ನ ತೋಳಲಿ ಸೆರೆ ಮಾಡಲಾ? ಪ್ರೀತಿಯಿಂದ ಶೃಂಗಾರವ ಮಾಡಿ ರಾಣಿ ಎನ್ನಲಾ? ಹಣೆಯ ಮೇಲೆ ಸಿಂಧೂರವ ಇಟ್ಟು ಅಂದ ಹೊಗಳಲಾ? ನೀನೆ ನನ್ನ ಅರ್ಧಾಂಗಿಣಿ ಒಪ್ಪಿ ಬಿಡು ಈ ಜನ್ಮದಲಿ ಬೇರೆ ಏನು ಬೇಡ ಕೇಳು ನಿನ್ನಂದಧ ಸಂಪತ್ತಲಿ ನಿನ್ನಂದ ಸವಿಯೋ‌ ಪ್ರೇಮಿ ನಾನು ಆಗಲಾ? ನಿನ್ನುಸಿರ ಕೇಳೊ ಕಿವಿಗಳು ನನ್ನದಾಗಲಾ? ನಿನ್ನೆದೆಯ ಹೃದಯದ ಮಿಡಿತವ ನಾ ಕೇಳೆನಾ? ನನ್ನುಸಿರ ಸ್ವರದಲ್ಲಿ ನಿನ್ನೆಸರ ನಾ ಹೇಳೆನಾ? ನೀನಿಲ್ಲದ ಈ ಜೀವ ಏಕಾಂಗಿ ನಾ‌!

----------------------------------

ನೋಂದಣಿ ಐಡಿ : KPFS2-7665

0
Votes
121
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top