Submission 3876

ವಸುಂಧರೆ

ರಚನೆ : ದರ್ಶನ್ ಎನ್

----------------------------------

ಇರುವುದೊಂದು ಧರೆ, ಇದಕ್ಕೆ ಮಾನವನೇ ದೊರೆ. ಕೊಡುವನು ಉದ್ದಕ್ಕೆ ಕರೆ, ದಾಟಿದರೆ ಗೆರೆ, ಹಾಕುವನು ಬರೆ. ಜೀವಿಸಲು ಕಡಿಯುವ, ಮರದ ಪೊಟರೆ, ಕೇಳಿಸದು ಅವನಿಗೆ, ಪ್ರಾಣಿಪಕ್ಷಿಗಳ ಮೊರೆ. ನಿರ್ಮಿಸುವ ಮಹಾನಗರ ತಯಾರಿಸಲು ಸಕ್ಕರೆ, ಮಾಯವಾಗುತ್ತಿವೆ ಕೊಕ್ಕರೆ, ಚಿಗರೆ. ಚಿನ್ನಕಾಗಿ ಧರೆಯ ಕೊರೆ, ಸಿಗುತ್ತಿಲ್ಲ ಸಂಪತ್ತಿನ ಸೆಲೆ. ಕಣ್ಮುಂದಿದೆ ಸಮಯದ ಪರೆ, ಮರೆತಿರುವ ಸಂಬಂಧಗಳ ಅಕ್ಕರೆ. ಅಂತಿಮದಿ ಬರುಹುದು ಯಮನ ಕರೆ, ಕೊನೆಗೂ ಬೇಕು ಮಲಗಲು ಈ ಧರೆ...!

----------------------------------

ನೋಂದಣಿ ಐಡಿ : KPFS2-7666

0
Votes
122
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top