ಆಡುಂಬೊಲ
ರಚನೆ : ಸೀತಾ ವ್ಯಾಸಮುದ್ರಿ
----------------------------------
ಆಡುಂಬೊಲವಿದು ಬದುಕಿನ ಶಾಲೆಯಲಿ, ಆಡಬೇಕು ಆಗಾಗ ಬಿಡುವಿನ ಅವಧಿಯಲಿ! ಅಲ್ಲ ಬರಿ ಮೋಜು ಮಸ್ತಿ ಮನರಂಜನೆ, ಜೊತೆ ಜೊತೆಗೆ ಧರ್ಮ- ನಿಯಮಗಳ ಪಾಲನೆ! ಮಾಡಿದರೆ ನಿಯಮಗಳ ಉಲ್ಲಂಘನೆ, ಕಾದಿಹುದು ಕಠೋರ ದಂಡನೆ! ಆಡಿಸುವನು ಆ ಭಗವಂತ ಎಲ್ಲರನು, ನೀಡುತ್ತ ಕಾಲಕಾಲಕೆ ತಕ್ಕ ಸಲಹೆಗಳನು! ಮಾಡು ಎಂದಂತೆ ಮಾಡುವದು ಧರ್ಮ, ಬೇಡೆಂದುದನು ಮಾಡುವದು ನಮ್ಮ ಕರ್ಮ! ಇದ್ದರೆ ನಮ್ಮಲ್ಲಿ ಆಜ್ಞಾಪಾಲನೆಯ ಛಲ, 'ಅಲ್ಲಿ' ಉಂಟು ನಮಗೆ ಸುಕೃತದ ಫಲ! ಇರದಿರೆ ಜಾಗರೂಕತೆ ಬದುಕಿನಲಿ, ಮುಳುಗುವದು ಖಚಿತ ಭವಸಾಗರದಲಿ!
----------------------------------
ನೋಂದಣಿ ಐಡಿ : KPFS2-7664