ಮೂಲದ ಮೌನ
ರಚನೆ : ಚಂದನ್‌ರಾಜ್ ಎಸ್
----------------------------------
ಕಾವೇರಿಯ ತೀರದ ಮಂಜು, ನಿನ್ನೆಯ ಕನಸಿನ ಸುವಾಸನೆ, ಮಣ್ಣಿನ ವಾಸನೆ, ಮಳೆಗೆ ಬೆರೆತ ಹಸಿರು ನುಡಿಸು. ಹಳ್ಳಿ ಬೀದಿಯ ಓಲಾಟ, ಗಾಳಿಯಲ್ಲಿ ಹಾರುವ ಕಾಗದದ ಪಟ, ಮನೆ ಮುಂದೆ ಕೂತು ಕೇಳುತ್ತಿದ್ದೆವು ಆ ಹಳೆಯ ರೇಡಿಯೋ ಪಾಟ. ಅಜ್ಜಿಯ ಹತ್ತಿರ ನಿದ್ದೆಗೆ ಮಡಿಲಾದ ಕತೆ, ಅಮ್ಮನ ಕೈಯ ಹೋಳಿಗೆ — ಪ್ರೀತಿಯ ಸುವಾಸನೆ. ಆ ಕಾಲದ ನಗುಗಳಲ್ಲಿ ಇರಲಿಲ್ಲ “ಫಿಲ್ಟರ್”, ಆದರೆ ಹೃದಯದೊಳಗಿತ್ತು ನಿಜವಾದ ಕನೆಕ್ಷನ್ ಸೆಂಟರ್. ಇಂದು ಸ್ಕ್ರೀನ್ ಬೆಳಗುತ್ತಿದೆ, ಆದರೆ ಹೃದಯ ಮಸುಕಾಗಿದೆ, ನಗುಗಳ ಚಿತ್ರವಿದೆ, ನಿಜದ ನಾದ ಮಾಯವಾಗಿದೆ. ನಗರದ ದಾರಿಯಲ್ಲಿ ಓಡಿದರೂ ಹೆಜ್ಜೆ ನಿಂತೇ ಬಿಡುತ್ತದೆ, ಹಳ್ಳಿಯ ಮಣ್ಣಿನ ಕರೆಯು ಮನದೊಳಗೇ ಬೀಜ ಬಿತ್ತುತ್ತದೆ. ಮರೆತು ಹೋಗದಿರಿ , ಬೇರು ಕಳೆದು ಹೋದರೆ ಹೂಗಳು ಬರಲಾರವು, ಮಣ್ಣನ್ನು ಕಾಪಾಡಿ, ನೆನಪನ್ನು ಜೀವಿಸಿ ಅಲ್ಲಿ ಇದೆ ನಮ್ಮ ಆತ್ಮದ ಬಣ್ಣವು. ಮೂಲ ಉಳಿಸೋಣ... ಏಕೆಂದರೆ ಕಾಲ ಬದಲಾಗಬಹುದು, ಆದರೆ ಮಣ್ಣಿನ ಪರಿಮಳ ಎಂದಿಗೂ ಮರೆಯಾಗುವುದಿಲ್ಲ.
----------------------------------
ನೋಂದಣಿ ಐಡಿ : KPFS2-7662