Submission 3860

ಕೊನೆಯ ಗೇಟು

ರಚನೆ : ರತ್ನಾಕರ ಗಡಿಗೇಶ್ವರ

----------------------------------

ಬೀಗವಿಲ್ಲದ ಮನೆಯ ಬಾಗಿಲು ಹಾಕಿ ಹೊರಟಿದ್ದೆ ನಾಯಿ ಕಟ್ಟಲು ಕಟ್ಟಿದ್ದ ತಂತಿ ಕಾಲಿಗೆ ಸುತ್ತಿತ್ತು ನಾಯಿಯೆಂದೋ ಸತ್ತಿತ್ತು .ನಾನು ನಿಯತ್ತಿಲ್ಲದೇ. ಕೊನೆಯ ಗೇಟು ದಾಟಿ ತಿರುಗಿ ನೋಡಿದೆ. ಸತ್ತವರ ಧ್ವನಿ ಏನಿರಲಿಲ್ಲ, ಜೀವಂತಿಕೆಗೆ ಹಸಿರಿತ್ತು ಕಸಬಿದ್ದು ಕಣ್ಣೀರು ಬರುತ್ತಿದೆ ಎಂದುಕೊಂಡಿದ್ದೇ, ಎದೆಯೊಳಗೆ ಜಲಪಾತ, ಕೊನೆ ನಿಲ್ದಾಣದಿಲ್ಲಿದ್ದೆ ನಾಳೆಗೆ ಬರುವ ಸಿರಿ ಎಳೆದು ಅಪ್ಪಿಕೊಳ್ಳಲು . ಸಿರಿಯ ಗರಿಯು ಬಂದಿತ್ತು, ಜೊತೆಗೆ ನಿಟ್ಟುಸಿರ ದೂಳಿನ ವಿಷಾದಕ್ಕೆ ಎದೆನೆಲೆದಲ್ಲಿ ಗಟ್ಟಿ ಕಫ ಹೊರಗೆ ಬರಲಾರದೆ ಕುಳಿತಿತ್ತು, ನಡುರಾತ್ರಿಗೆ ದೀಪಕ್ಕೂ ಎಣ್ಣೆ ಹಾಕುತ್ತಿದ್ದೆ, ಕೈ ಚೆಲ್ಲಿ ಬಿತ್ತು. ಹೊರಡಬೇಕು ಎಂದುಕೊಂಡೆ, ಕಬ್ಬಳಿಗೆ ಮುಳ್ಳು ಹಿಡಿದಿತ್ತು, ಕವಳಿ ಹಣ್ಣು - ಕಣ್ಣು ಎರಡು ಬಿದ್ದಿತ್ತು.

----------------------------------

ನೋಂದಣಿ ಐಡಿ : KPFS2-7657

27
Votes
307
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top