ನನಸಾಗದ ಕನಸು
ರಚನೆ : ರಕ್ಷಾ ಕೆ ಎಸ್
----------------------------------
ನಂಬುವುದಾದರೆ ಯಾರನ್ನು ನಂಬಲಿ ನಂಬಿಕೆಯೇ ಸತ್ತು ಮಸಣ ಸೇರಿಹುದಲ್ಲ ಕಷ್ಟಗಳು ಎದುರಾಗಿ ಹೃದಯಕ್ಕೆ ಚುಚ್ಚುತಿಹವಲ್ಲ ಓಡಿ ಹೋದರೂ ನೆರಳಂತೆ ಹಿಂಬಾಲಿಸುತಿಹುದಲ್ಲ ಆಗುವುದಾದರೆ ನಾ ಕಂಡ ಕನಸು ನನಸಾಗಬೇಕಲ್ಲ ಅದುಮಿಟ್ಟಿಹ ನೋವುಗಳು ಮತ್ತೆ ಚಿಗುರುವುದಲ್ಲ ಆಸೆಗಳ ತೋಟವನ್ನು ನೀರೆರೆದು ಬೆಳೆಸಲಿಲ್ಲ ಆದರೂ ಬಯಕೆಯ ಹೂವುಗಳು ನಗುತಿಹವಲ್ಲ ನಿಷ್ಠೆಯಿಂದಲಿ ಬಂದದ್ದನ್ನು ಎದುರಿಸುವುದು ಹೊಸತೇನಲ್ಲ ಎಷ್ಟೇ ಕಾಲವಾದರೂ ನನ್ನ ಕರ್ಮವು ಸವೆಯುತ್ತಿಲ್ಲವಲ್ಲ ನಿರೀಕ್ಷಿಸಿ ಹತಾಶೆಗೊಳಗಾಗುವುದು ತಪ್ಪಲಿಲ್ಲ ಆದರೂ ಹುಚ್ಚು ಮನಸ್ಸು ಅದಕಾಗೇ ಕಾದಿಹುದಲ್ಲ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲೇ ಇಲ್ಲ ಹಾಗೆಂದು ಪ್ರಯತ್ನ ಬಿಡುವುದು ತರವಲ್ಲ
----------------------------------
ನೋಂದಣಿ ಐಡಿ : KPFS2-7634