Submission 3512

ಕಾವ್ಯ ಕರುನಾಡು

ರಚನೆ : ಗುರುಪ್ರಸನ್ನ ಕಲ್ಲಪ್ಪ

----------------------------------

ಕರ್ನಾಟಕದ ಮಣ್ಣಲಿ ಕಾವ್ಯ ಕರುನಾಡು, ಭಾವದ ಹೊಳೆ ಹರಿದು ಮನದಾಳ ಮೂಡುವದು. ಪದ್ಯದ ಪರಿಮಳ ಸುಗಂಧ ಹರಡುವದು, ಜನಮನ ತಣಿಸುವ ಜ್ಯೋತಿಯಾಗಿ ನಗುವದು. ಸಾಹಿತ್ಯದ ಹಬ್ಬ ಇದು ಕಾವ್ಯೋತ್ಸವ, ಕವಿಗಳ ಕನಸುಗಳ ಪವಿತ್ರ ಪ್ರಾಸಾದ. ನಾದಮಯ ನುಡಿಗಳ ನಿತ್ಯ ನೃತ್ಯ, ಭಾವಗೀತೆಗಳಲಿ ಹೃದಯದ ಸ್ಪರ್ಶ. ಮಣ್ಣಿನ ಸುಗಂಧದ ಪದ್ಯ ಪರಿಮಳ, ನಮ್ಮ ಭಾಷೆಯ ಹೆಮ್ಮೆ, ಕನ್ನಡ ಕಾವ್ಯ ಕಲಾ. ಕೋಗಿಲೆಯ ನಾದದಂತೆ ಕವಿತೆಯ ಧ್ವನಿ, ಮನದ ಮೌನ ಮುರಿಯುವ ಶಬ್ದದ ಜ್ಯೋತಿ. ಕಾವ್ಯ ಕರುನಾಡು, ಕರುನಾಡ ಕೀರ್ತಿ, ಕಾವ್ಯವೇ ನಮ್ಮ ಜೀವನದ ಸಾರ್ಥಕ ಸ್ಮೃತಿ.

----------------------------------

ನೋಂದಣಿ ಐಡಿ : KPFS2-7388

0
Votes
125
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top