Submission 3446

ನಾ ಅರಿತ ಕನ್ನಡ

ರಚನೆ : ಶಿವಾನಂದ ಬಡಿಗೇರ

----------------------------------

ಕಪ್ಪು ನೀಲಿ ಶ್ರೀ ಕೃಷ್ಣನಷ್ಟೇ ದೈವವಿದು ಕರೀಮಣ್ಣ ತೀಕ್ಷ್ಣ ಕನ್ನಡವಿದು ತುಂಬಾ ಹಳೆಯದು ಸರ್ವ ಧರ್ಮಗಳ ಗರ್ವ ಕರ್ಮಗಳ ಕಾಯಕ ಬಸವಣ್ಣನ ಮದಕರಿ ನಾಯಕನ ಶಾಂತಿ ಕ್ರಾಂತಿ ಪುಣ್ಯ ಭುವಿವಿದು ಕನ್ನಡ.. ನುಡಿ ಕುಲಕೋಟಿ,ಗುಡಿ ಮುಕ್ಕೋಟಿ, ಕುಡಿ ಅಮೃತ ಕಾವೇರಿಯಿಂದ ಗೋದಾವರಿಗಿನ ಜಲಕೋಟಿ ಕನ್ನಡ.. ಕದಂಬರ ಗಂಗರ ಮಯೂರ ಸಾಹಸವೀರ ಚಾಲುಕ್ಯ ಹೊಯ್ಸಳ ವಾಸ್ತುಶಿಲ್ಪ ಸುಂದರ ರಾಷ್ಟ್ರಕೂಟ ವಿಜಯನಗರ ಗತವೈಭವದ ಮೈಸೂರ. ಕಿವಿಗಿಂಪು ಕುವೆಂಪು ಕನ್ನಡ. ಮನಕೆ ತಂಪು ಕಂಪು ಚಂಪೂ ಕನ್ನಡ ಧರೆ ಬೆಂದರೆ ತಾಯ್ನಾಡಿಗೆ ಅನ್ನ ದ.ರಾ. ಬೇಂದ್ರೆ ಬರದರೆ ತಾಯ್ನುಡಿಯೆ ಚೆನ್ನ..

----------------------------------

ನೋಂದಣಿ ಐಡಿ : KPFS2-7343

8
Votes
208
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top