Submission 3360

ಕನ್ನಡ ನುಡಿಯಲ್ಲಿ ಜೀವದ ನಾದ

ರಚನೆ : ರಕ್ಷಿತಾ ಎ ಹೆಗ್ಡೆ

----------------------------------

ಕನ್ನಡ, ನಿನ್ನ ನುಡಿಯಲ್ಲಿ ಜೀವದ ನಾದ, ಹೃದಯದ ತಂತಿಯಲಿ ಮೂಡುವ ಸಾದ. ನಿನ್ನ ಅಕ್ಷರದಲ್ಲಿ ಕಾಣುವ ಕರುಣೆ, ನಿನ್ನ ಪದ್ಯದಲ್ಲಿ ಬೆಳೆಯುವ ಧಾರೆ. ಮಣ್ಣಿನ ಸುಗಂಧ ನಿನ್ನ ನುಡಿಯಲಿ ಹರಿದು, ಜನ್ಮದಿಂದಲೇ ನಿನ್ನ ಪ್ರೀತಿ ಮುದಿದು. ಹಳ್ಳಿ ಬೀದಿಯ ಹಾಡು ನಿನ್ನ ನೆನಪು, ಬೆಟ್ಟ ನದಿಯಲಿ ನಿನ್ನ ಪ್ರತಿಧ್ವನಿಯ ರೂಪು. ತಾಯಿ ನುಡಿಯಂತೆ ಸಿಹಿಯಾದ ತೋರು, ಕನಸುಗಳ ಬಾಳಿಗೆ ಬೆಳಕಿನ ಝೇಂಕರ. ಕಲೆ, ಸಂಸ್ಕೃತಿ, ಭಾವದ ನಿನ್ನ ಸೇತುವೆ, ಕಾಲದ ದೋಣಿಯಲಿ ನಿತ್ಯದ ಪ್ರೇರಣೆ. ನಿನ್ನಲ್ಲಿ ಬದುಕು ನಿನ್ನಲ್ಲಿ ಪ್ರಾಣ, ಕನ್ನಡ, ನೀನೆ ನನ್ನ ಆತ್ಮದ ತಾಣ.

----------------------------------

ನೋಂದಣಿ ಐಡಿ : KPFS2-7286

95
Votes
616
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top