Submission 3332

ಕಾಲೇಜಿನ ಅನಂತ ಮುಖ

ರಚನೆ : ಮುತ್ತಪ್ಪ ಮಣ್ಣೂರು

----------------------------------

ಕಷ್ಟಪಟ್ಟು ನೀ ಕಾಲೇಜಕ ಬರ್ತಿ ಕಲಿಯೋದ ಬಿಟ್ಟು ಗೇಲಿಯ ಮಾಡತಿ ಹಿಂಗ ಮಾಡಕೊಂತ ನಿನ್ನ ಆಯುಷ್ಯ ಅರ್ಧಕ್ಕ ಬಂದೈತಿ ಕಲಿಯೋದಿನ್ನೇನುಳದೈತಿ ಕಲಿಯೋದ ಬಿಟ್ಟು ಕಲಿಸೂ ಬುದ್ಧಿ ನಿನಗ ಯಾವಾಗ ಬರತೈತಿ ಬರಲಿ ಬೇಗ ಬಂದೇನುಪಯೋಗ ಶಿವನ ಪಾದ ಸೇರಾಗ ತಿಳಿಯೋದಕ್ಕ ಬಂದಿರಿ ತಿಳ್ಕೊಂಡು ಹೋಗು ನಿರೀಕ್ಷೆ ಇಟ್ಟಾರ ಬಾಳ ನಿಮ್ಮನಿಯಾಗ ಕಷ್ಟಪಟ್ಟು ನಿನ್ನನ್ನ ಕಲಿಯಾಕ ಕಳಿಸ್ಯಾರಂದ್ರ ಕಷ್ಟಕ್ಕೊಯ್ಯುವಷ್ಟು ನಿರೀಕ್ಷೆ ಇಟ್ಟಾರ ನಿನಮ್ಯಾಗ ನಿನ್ನವರ ನೀ ತಿಳ್ಕೊಂಡು ನೋಡು ತಿಳಕೊಂಡು; ಮ್ಯಾಲ ಬರುವಂತ ಕೆಲಸ ಮಾಡು

----------------------------------

ನೋಂದಣಿ ಐಡಿ : KPFS2-7267

3
Votes
119
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top