Submission 3328

ಕನಸಿನ (ಸಾದ) ಕನ್ಯೆ.

ರಚನೆ : ಸುಹಾಸ್ ಕುಮಾರ್ ಕೆ

----------------------------------

ಕನವರಿಸುವ ಪ್ರತಿ ಕನಸಿನೊಳಗೂ ಕಾಣುತಿಹೆ ನಿನ್ನ ಮುಗ್ಧ ಪ್ರತಿಬಿಂಬ ಕಿಟಕಿಯ ಭೇದಿಸಿ ಒಳಬಂದ ಉದಯ ಕಿರಣದಂತೆ ಕೀರ್ತನೆಯಲಿ ಮಿಳಿತವಾದ ಮಧುರ ರಾಗದಂತೆ... ಕುಶಲವೇ? ಎಂದಾಗ ನೀ... ಕೂಗಿಕೊಂಡಿತು ನನ್ನ ಹೃದಯ ಉಲ್ಲಾಸದಿಂದ ಕೃತಿಮತೆಯಿಲ್ಲದ ಪ್ರೀತಿಯಿಂದ... ಕೆತ್ತಿಹೆ ನನ್ನ ನಾಳೆಗಳನು ನಿನ್ನೊಂದಿಗೆ ಕೇಳುತ ನಿನ್ನ ಮಧುರ ವಾರ್ತಾಲಾಪವ... ಕೈಗೊಂಬೆಯಾದೆ ನಾನು ನಿನ್ನ ನಗುವಿಗೆ... ಕೊತ್ವಾಲನಾದೆ ನಿನ್ನ ಕನಸಿನ ಅರಮನೆಗೆ... ಕೋರಿಕೆಯೊಂದಿದೆ, ಉತ್ತರಿಸು ಕಣ್ಸನ್ನೆಯಲಿ... ಕೌತುಕದಿಂದ ಕಾದಿಹ ನನ್ನ ಕಂಗಳಿಗೆ

----------------------------------

ನೋಂದಣಿ ಐಡಿ : KPFS2-7261

7
Votes
178
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top