ಹೆಮ್ಗೆಂಪು ಮಳೆ
ರಚನೆ : ಗೋಳೂರ ನಾರಾಯಣಸ್ವಾಮಿ
----------------------------------
ರಾತ್ರಿ ಪೂರ್ತಿ ಮಳೆ ಅಳುತ್ತಿತ್ತು; ಘನಘೋರ ಸದ್ದಿನೊಂದಿಗೆ ಬಂದ ಮಳೆ ಪಟ್ಟುಬಿಡದೆ ಕಣ್ಣೀರು ಸುರಿಸುತ್ತಿತ್ತು! ಈ ಮಳೆಯೂ ಗಿಬ್ರಾನ್ ಕವಿಯ ದೂರದ ಲೆಬನಾನ್ನಿಂದಲೂ ಗಾಜಾದಿಂದಲೂ ಬಂದು ನೇರವಾಗಿ ಮಣಿಪುರ ತಲುಪಿತ್ತು! ಹಿಂದೆ ನಾನು ಚಿಕ್ಕವನಾಗಿದ್ದಾಗ ಕಾರ್ಗಿಲ್ನಿಂದಲೂ ಈ ಮಳೆ ಬಂದಿತ್ತು. ನಾನಾಗ ಇಸ್ಕೂಲಿನಿಂದ ಮನೆಗೆ ಹೋಗುವಾಗ ಈ ಮಳೆಯಲಿ ನೆನೆದು ನನ್ನ ಎಳೆ ಹೃದಯ ನೊಂದುಹೋಗಿತ್ತು! ಈಗ ಮತ್ತೆ ಅದೇ ಮಳೆ ಬಂದಿದೆ: ದುಃಖದ ಕಡಲಲಿ, ಸಾವಿನ ಉತ್ಸವ ನಡೆಸಿದೆ! ಮನುಜ ನಾಳೆಯ ಉಳಿಸು.
----------------------------------
ನೋಂದಣಿ ಐಡಿ : KPFS2-7259