Submission 3324

ಕನ್ನಡ

ರಚನೆ : ಹರೀಶ್ ಎಸ್ ಎಂ

----------------------------------

ಬಂದಿದೆ ಮತ್ತೆ ಎಂದಿನಂತೆ ಕನ್ನಡ ರಾಜ್ಯೋತ್ಸವ ಇದು ನಿಜಕ್ಕೂ ಕರುನಾಡಿಗೆ ಹಬ್ಬದ ಉತ್ಸವ ನವೆಂಬರ್ ನಲ್ಲಿ ಮಾತ್ರ ಸೀಮಿತವಾಗದಿರಲಿ ಪ್ರತಿ ಮನೆಯಲ್ಲು ಕನ್ನಡವೇ ಮಾತಾಗಿರಲಿ..!! ಮೂಲೆ ಗುಂಪಾಗಿದೆ ಇಂದು ಕನ್ನಡ ಮಾಧ್ಯಮ ವಸೂಲಿಯಿಂದ ತಲೆ ಎತ್ತಿ ನಿಂತಿದೆ ಆಂಗ್ಲ ಮಾಧ್ಯಮ ಇಂಗ್ಲೀಷ್ ಕಲಿಯುವುದು ತಿಂಗಳ ಸಂಬಳಕ್ಕಾಗಿ ಕನ್ನಡ, ಆಚಾರ ವಿಚಾರ ಸಂಸ್ಕೃತಿಗಾಗಿ..!! ಆಟೋ,ಕ್ಯಾಬ್,ಬಸ್ ಡ್ರೈವರ್ ಗಳೇ ನಿಜವಾದ ಕನ್ನಡಿಗರು ಭಾಷೆ ವಿಚಾರ ಬಂತೆಂದರೆ ಬೆಂಬಲವಾಗಿ ನಿಲ್ಲುವರು ಹಾದಿ ಬೀದಿಯಲ್ಲಿ ಕನ್ನಡ ಹಾಡುಗಳದ್ದೇ ಕಾರುಬಾರು ಕನ್ನಡ ಟೀ ಶರ್ಟ್ ಧರಿಸಿ ಸುತ್ತೋಣ ಊರೂರು..!! ಬಳಸಿರಿ ಕನ್ನಡ ಬೆಳೆಯುವುದು ಕನ್ನಡ ಹರಿದಾಡುತಿರಲಿ ಕನ್ನಡ ಹೆಸರಾಗಲಿ ಕನ್ನಡ..!!

----------------------------------

ನೋಂದಣಿ ಐಡಿ : KPFS2-7255

1
Votes
135
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top