Submission 3306

ಬೆಳಕಂಚಿನ ಚಂದ್ರ

ರಚನೆ : ಮಲ್ಲಿಕ್

----------------------------------

ಬೆಳಕಂಚಿನಿಂದ ಕಂಡ ಚಂದ್ರನು ಕಣ್ಣಿಗೆ ಹತ್ತಿರವಿದ್ದಂತೆ ಕಂಡನು. ಇಂದೇನು ಹುಣ್ಣಿಮೆಯಲ್ಲ ಆದರೂ ಚಂದ್ರನ ಬೆಳಕು ಇಷ್ಟೋಂದಿದಿಯಲ್ಲಾ...! ಬಾನಲಿ ಕಾಣೋ ಚಂದ್ರನನ್ನೇ ದಿಟ್ಟಿಸಿ ನೋಡುತ್ತಿದ್ದೆ ಆ ಚಂದ್ರನಲ್ಲೇ ನಾ ನಿನ್ನ ಪ್ರತಿಬಿಂಬವ ಕಾಣುತ್ತಿದ್ದೆ... ನಿನ್ನ ಬೆಳಕಲ್ಲೇ ನಾ ಮಲಗುವಾಸೆ ನೀ ಮಾಯವಾಗಿ ಮಾಡದಿರು ನಿರಾಸೆ... ಸೂರ್ಯನ ತಾಪದ ಬೆಳಕು ಬೇಡವಾಗಿದೆ ನಿನ್ನಯ ತಂಪಿನ ಬೆಳಕೇ ಬೇಕಾಗಿದೆ... ಚಂದ್ರನನ್ನೇ ನೋಡುತಾ ಬರೆಯುವ ಮನಸಾಗಿದೆ ಹೇ ರಾತ್ರಿಯೇ, ನೀ ಇದ್ದುಬಿಡು ಹೀಗೆ ಹಗಲಾಗದೆ... ಬೆಳಕಂಚಿನಿಂದ ಕಂಡ ಚಂದಿರ ಬೆಳಕಂಚಿನಿಂದಲೇ ಕೆಳಗೆ ಜಾರಿಹೋದ..!

----------------------------------

ನೋಂದಣಿ ಐಡಿ : KPFS2-7242

0
Votes
129
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top