Submission 3304

ಮುಂಗಾರು!

ರಚನೆ : ಎ ಪ್ರದೀಪ್

----------------------------------

ಬಿರು ಬೇಸಿಗೆಬೇಗುದಿಯ ತಾಳ್ಮೆ ಕಟ್ಟೆ ಒಡೆದ ಅಂಬರದಾಟವೇ ಮುಂಗಾರು ಬೆಂದ ನೆಲಕ್ಕೆ ಚಂದದ ಅಭಿಷೇಕ ಮುಂಗಾರು ರೈತರ ನೇಗಿಲಿನ ಭರವಸೆಯ ಗೆರೆಯ ರಂಗವಲ್ಲಿಯೇ ಮುಂಗಾರು ಮುಗಿಲಿಗೆ ಮಿಂಚಿನ ತೋರಣದ ಸಿಂಗಾರವೇ ಮುಂಗಾರು ನಿಸರ್ಗದಮ್ಮನ ಮೌನ ಮಾತಾಗುವ ವೇಳೆಯೇ ಮುಂಗಾರು ಸಿಡಿಲಿನ ತಾಳ, ಜುಳು-ಜುಳು ನೀರಿನ ರಾಗ, ತಂಗಾಳಿಯ ಕೊಳಲಿನ ನಾದದ ಜುಗುಲ್ಬಂದಿಯೇ ಮುಂಗಾರು ಪ್ರಕೃತಿ ಮಾತೆಯ ಹಸಿರು ಸೀರೆಯ ಸೆರಗ ಸಿಂಗರಿಸುವ ಆಭರಣವೇ ಮುಂಗಾರು ಇಳೆಯ ಹಸಿರಿನ ಬಸಿರೇ ಮುಂಗಾರು ಮನುಜನ ಮನದ ಕಡಲಿನ ಭಾವ ತೀರದ ಯಾನವೇ ಮುಂಗಾರು ನದಿಯ ಹುಟ್ಟು ಮುಂಗಾರು, ಸಾಗರ ಸಂಗಮ ಮುಂಗಾರು ಮುಂಗಾರೆಂದರೆ ಬರಿ ಮಳೆಯಲ್ಲ ಅದು ಸಮಸ್ತ ಸೃಷ್ಟಿಯ ಆನಂದಭಾಷ್ಪ

----------------------------------

ನೋಂದಣಿ ಐಡಿ : KPFS2-7241

5
Votes
155
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top