ಹಕ್ಕಿಗಳ ಚಿಲಿಪಿಲಿ ಗಾಯನ ವೈಭವ ಲಹರಿ...!
ರಚನೆ : ದೀಕ್ಷಿತ ಶಿವ
----------------------------------
ಹಕ್ಕಿಗಳ ಚಿಲಿಪಿಲಿ ಗಾಯನ ವೈಭವ ಲಹರಿ. ಸೂರ್ಯನು ಆಗಮಿಸಿದ ಬೆಟ್ಟಗಳ ಮರೆಯಲ್ಲಿ! ಹೇಗೆ ವರ್ಣಿಸಲಿ ಅವಳನ್ನ ನೋಡಿದ ಆ ಮಧುರ ಕ್ಷಣ. ಕಳೆದು ಹೋಗಿರುವೆ ಆ ನಿನ್ನ ಸವಿ ನೆನಪಿನಲ್ಲಿ ನಾ. ಸಮಯವೇ ನಿಂತಂತಾಯಿತು ನಿನ್ನ ನೋಡಲು ನಾ! ಹೇಗೆ ವರ್ಣಿಸಲಿ ನಿನ್ನ ರೂಪವ ಸೌಂದರ್ಯದೇವತೆ. ನಿನ್ನ ನಡಿಗೆಯು ಆಡಂಬರದ ಹಂದರದಂತೆ. ನಿನ್ನ ಕೇಶರಾಶಿಯ ಜಾಲದಲ್ಲಿ ನನ್ನ ಸಿಲುಕಿಸಿದಾತೆ. ನಿನ್ನ ನಗುವಿನ ಸವಿ ಶೃತಿಯಲ್ಲಿ ನನ್ನ ಕಳೆದುಹಾಕಿದಾತೆ. ನಿನ್ನ ಕೋಗಿಲೆ ಕಂಠದ ಧ್ವನಿಯಲ್ಲಿ ನನ್ನ ಮೋಹಮಾಡಿದಳಾತೆ. ನಿನ್ನ ಕಣ್ಣಿನ ಪ್ರಪಂಚದಲ್ಲಿ ನನ್ನನ್ನು ಬಂಧಿಸಿದಳಾತೆ. ನಕ್ಷತ್ರ ಮತ್ತು ಪ್ರಕೃತಿಯ ಸುಂದರ ಹೊದಿಕೆ ನಿನ್ನ ಮೇಲೆ! ಆಕಾಶದಿ ಮೋಡಗಳ ಮರೆಯಿಂದ ಹನಿಗಳ ಸಂಗೀತ. ತಂಗಾಳಿಗೆ ನಾಚಿ ನೀರಾಗಿ ವೃಕ್ಷಗಳು ಕುಣಿಯುತ್ತ. ಬರಮಾಡಿದೆ ಪ್ರಕೃತಿಯು ನನ್ನ ದೇವತೆಯನ್ನ. ಆದರೂ ಅವಳು ಮಾತನಾಡದೆ ಬಿಟ್ಟು ಹೋದಳು ನನ್ನ. ದಶಕಗಳಾದರು ಕಾಯುತ್ತೀನಿ ಎನ್ನುವ ಹಠ ನನ್ನ!
----------------------------------
ನೋಂದಣಿ ಐಡಿ : KPFS2-7155