ಗಡಿಯಾರದ ಅಂಕಿತ
ರಚನೆ : ಪ್ರತಿಭಾ ಎಂ ಟಿ
----------------------------------
ಎದೆಯ ಗಡಿಯಾರದ ಅಂಕಿತ. ಚಂದ್ರ ಗಡಿಯಾರದ ನಿಮಿತ್ತ. ಮೋಡ ಮಳೆಯ ಸಮಯ. ನೋಡಿಕೊಂಡಿತು ಹೃದಯ. ಸೃಷ್ಟಿಯಲ್ಲಿ ಹೂವು ಅರಳುವ ಸಮಯ. ಭಾವ ಕೊಂಡಿತು ಹೃದಯ. ಗೋಚರ ಮತ್ತು ಅಗೋಚರ ಶಕ್ತಿ. ಅದುವೆ ಮನಸಿನ ಮುಕ್ತಿ. ಭೂಮಿ ಮತ್ತು ಆಕಾಶ ನಡುವಿನ ಅಂತರ. ಅಂತ್ಯವಿಲ್ಲದ ಅಷ್ಟು ಎತ್ತರ. ನವರಸ ತರಂಗ. ಭಾವಿಸುವುದು ಅಂತರಂಗ. ಸಾಗುವುದು ಸಮಯ, ಹೂವು ಅರಳುವ ರೀತಿ. ಅದ ನೋಡುವ ಸೊಗಸು, ಬರದು ಭೀತಿ. ಪರಿಶುದ್ಧ ಮನಸ್ಸು ಆಗುವ ಇಂಗಿತ. ಇದುವೆ ಪ್ರತಿ ಸಮಯದಲ್ಲಿ ಆಗುವ ಅಂಕಿತ.
----------------------------------
ನೋಂದಣಿ ಐಡಿ : KPFS2-7154