Submission 3094

ಕೆಂಡಸಂಪಿಗೆ

ರಚನೆ : ಪ್ರದ್ಯುಮ್ನ ಆರ್ ಕಲ್ಲವಿ

----------------------------------

ಪ್ರಥಮ ರವಿ ಕಿರಣ ಬೆಳಗು ಸಂಪಿಗೆಯ ದೀಪ, ಮರದ ಮೇಲೆ ಹಣತೆಯಂತೆ ದಳಗಳದು ಧೂಪ, ಪಿಸು ಗಾಳಿ ಹಾಡುತಿರೆ ನಲಿವುದಾ ಪಿಸು ಬೆಂಕಿ, ಕಾಡಿಚ್ಚೆ ಹರಡಿಹುದು ಕೆಂಡ ನೆಲವೆಲ್ಲ. ಇಂಪಾಗಿ ಕಂಪ್ಪೆಲ್ಲ ಹಕ್ಕಿಯಿಂ ಹಬ್ಬಿ, ಕೆಂಡದಿಂ ಹೊಗೆಯಂತೆ ಮಂಜು ತನು ತಬ್ಬಿ, ಕವಿದಿಹುದು ಮೋಡ ಹೊಗೆ ಕವಿದಂತೆ ಚಾವಣಿಯ, ಇರುಳಲ್ಲು ಕೆಂಡಗಳು ಹರಡಿಹುದು ಬಾನೆಲ್ಲ.

----------------------------------

ನೋಂದಣಿ ಐಡಿ : KPFS2-7081

1
Votes
117
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top