ನಾನು ನಿಶಬ್ದ ನದಿ
ರಚನೆ : ಆದರ್ಶ್ ವೈ ಸಿ
----------------------------------
ಜೀವನದ ಪಥದಲ್ಲಿ ಮೌನವೇ ಸಹವಾಸ, ನಗುವುಗಳು ದೂರ, ಉಳಿದಿದೆ ಕೇವಲ ಉಸಿರಿನ ವಾಸ. ಹೃದಯದ ತೋಟದಲ್ಲಿ ಹೂಗಳು ಒಣಗಿವೆ, ಕನಸುಗಳ ಮರಗಳು ಬೇರು ಕಳೆದುಕೊಂಡಿವೆ. ಎಲ್ಲಿ ಹೋದವು ಆ ಬಣ್ಣದ ಬೆಳಕುಗಳು, ಈಗ ಉಳಿದವು ಕತ್ತಲೆಯ ನೆನಪುಗಳು. ನಡೆಯುತ್ತೇನೆ ನಗೆಯಿಲ್ಲದ ದಾರಿಯಲ್ಲಿ ನೋವು ತುಂಬಿದ ಹೃದಯದ ಧ್ವನಿಗಳ ಚರಿತೆಯಲ್ಲಿ. ಯಾರೂ ಕೇಳದ ಕಿವಿಯಲ್ಲಿ ಕೂಗು ಸತ್ತಿದೆ, ನೋವಿನ ಜೊತೆಗೆ ಭರವಸೆಯೂ ಮೌನವಾಗಿದೆ ದಿನಗಳು ಹೋಗುತ್ತಿವೆ ಹೆಸರು ಇಲ್ಲದಂತಿವೆ, ಕಾಲವು ಕಳೆಯುತ್ತಲೇ ವಯಸ್ಸು ಓಡುತ್ತಿದೆ. ಆದರೂ ಎದೆಯಲಿ ಒಂದು ವಿಶ್ವಾಸ ತೇಲುತ್ತದೆ, “ಬಹುಶಃ ನಾಳೆ ಹೊಸ ಬೆಳಕು ಮೂಡುವುದೇ?” ಎನ್ನುತ್ತದೆ
----------------------------------
ನೋಂದಣಿ ಐಡಿ : KPFS2-7079