Submission 2878

ನಾವು ಹಸಿದವರು

ರಚನೆ : ಶಿವರಾಜು ಆರ್ ಎಸ್ ರಂಗಾಪುರ

----------------------------------

ನಾವು ಹಸಿದವರು ನೋವಿನಲ್ಲಿ ಬೆಂದು ನಮ್ಮ ಕನಸುಗಳ ಕೊಂದು ಯಾರದೋ ಕನಸ ನನಸಾಗಿಸಲು ಹಗಲಿರುಳು ದುಡಿಯುವವರು ನಾವು ಹಸಿದವರು ಅರಮನೆ ಬಂಗಲೆಗಳ ಕಟ್ಟುವವರು, ಸೋರುವ ಸೂರಿನಡಿ ನೆನೆಯುವವರು ಹಗಲಿರುಳು ದುಡಿದರೂ ಹೊಟ್ಟೆ ತುಂಬದೆ ನರಳುವವರು ನಾವು ಹಸಿದವರು ಸಾಲದಲ್ಲಿ ಹುಟ್ಟಿ, ಸಾಲದಲ್ಲಿ ಬದುಕಿ ಸಾಲಗಾರರಾಗಿಯೇ ಸಾಯುವವರು ನಾವು ಹಸಿದವರು ನಮ್ಮೊಳಗೂ ಕ್ರಾಂತಿಯ ಕಿಚ್ಚಿದೆ, ನಮ್ಮದು ಕ್ರಾಂತಿಯ ಕೆಚ್ಚೆದೆ ಆದರೂ ಕ್ರಾಂತಿ ಕಿಡಿಯ ಗೌಣವಾಗಿಸಿ ತಣ್ಣಗಾಗಿ ಬಿಡುತ್ತೇವೆ ನಾವು ಹಸಿದವರು

----------------------------------

ನೋಂದಣಿ ಐಡಿ : KPFS2-6928

0
Votes
125
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top